ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ(Bigg Boss Kannada 11) ಅದ್ಧೂರಿಯಾಗಿ ಚಾಲನೆ ಸಿಕ್ಕ ಬೆನ್ನಲ್ಲೇ ಹಿಂದಿಯಲ್ಲೂ ಬಿಗ್ ಬಾಸ್ ಶುರುವಾಗಿದೆ. ವಿಶೇಷ ಅಂದರೆ ಸೀಸನ್ 18ರ (Bigg Boss Hindi 18) ಬಿಗ್ ಬಾಸ್‌ಗೆ ಕತ್ತೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದೆ.

View this post on Instagram
ಈ ಹಿಂದೆ ಸೀಸನ್ 10ರ ಬಿಗ್ ಬಾಸ್‌ಗೆ ಚಾರ್ಲಿ (Charlie) ಎಂಟ್ರಿ ಕೊಡಲಿದ್ದಾಳೆ ಎಂದು ವಾಹಿನಿ ಹೇಳಿಕೊಂಡಿತ್ತು. ಚಾರ್ಲಿ ದೊಡ್ಮನೆಗೆ ಬಂದೇ ಬರುತ್ತಾಳೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದರು. ಆದರೆ ಗ್ರ‍್ಯಾಂಡ್ ಓಪನಿಂಗ್ ಸಮಯದಲ್ಲಿ ಚಾರ್ಲಿ ಕಾಣಿಸಿಕೊಂಡಿರಲಿಲ್ಲ. ಚಾರ್ಲಿ ಎಂಟ್ರಿಗೆ ‘ಅನಿಮಲ್ ಬೋರ್ಡ್’ಗೆ ಬಿಗ್ ಬಾಸ್ ತಂಡ ಅಪೀಲ್ ಮಾಡಿತ್ತು, ಆದರೆ ಅನಿಮಲ್ ಬೋರ್ಡ್‌ನಿಂದ ಅನುಮತಿ ನೀಡಿರಲಿಲ್ಲ. ಆದರೆ ಈ ಬಾರಿಯ ಹಿಂದಿ ‘ಬಿಗ್ ಬಾಸ್ 18’ಕ್ಕೆ ಅಚ್ಚರಿಯ ರೀತಿಯಲ್ಲಿ ಸ್ಪರ್ಧಿಯಾಗಿ ಕತ್ತೆ ಎಂಟ್ರಿ ಕೊಟ್ಟಿದೆ.
ಸಲ್ಮಾನ್ ಖಾನ್ (Salman Khan) ನಿರೂಪಣೆಯ ‘ಬಿಗ್ ಬಾಸ್ ಸೀಸನ್ 18’ರ ಶೋನಲ್ಲಿ ಈ ಕತ್ತೆ (Donkey) ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆ ಗಧರಾಜ್ ಅನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ.

