ರಾಯಚೂರು: ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ರೋಗಿಗಳು ಮಾತ್ರವಲ್ಲ, ಕತ್ತೆಗಳು ಬರುತ್ತವೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಆಗಾಗ ಹಂದಿ, ನಾಯಿಗಳು ಬರುತ್ತಿದ್ದವು. ಇದೀಗ ಕತ್ತೆಯ ಎಂಟ್ರಿಯಾಗಿದೆ. ಸಿಂಧನೂರು ತಾಲೂಕಾಸ್ಪತ್ರೆಗೆ ಬಂದ ಕತ್ತೆ ಅರ್ಧಗಂಟೆ ಕಾಲ ಆಸ್ಪತ್ರೆಯಲ್ಲೆ ಕಾಲ ಕಳೆದಿದೆ.
ಕತ್ತೆ ನೇರವಾಗಿ ಒಪಿಡಿ ಹತ್ತಿರ ಬಂದರೂ ಹೇಳುವವರಿಲ್ಲ, ಕೇಳುವವರಿಲ್ಲ. ಚೀಟಿ ಮಾಡಿಸಲು ಕ್ಯೂ ನಿಂತಿದ್ದ ರೋಗಿಗಳು ಹಾಗೂ ರೋಗಿಗಳ ಕಡೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ಕತ್ತೆ ಬಂದಿದೆ ಓಡಿಸಿ ಅಂತ ಮಹಿಳೆಯರು ಕೂಗಾಡಿದರೂ ಆಸ್ಪತ್ರೆಯಲ್ಲಿ ಕೇಳುವವರಿಲ್ಲ. ವೈದ್ಯಾಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ತಾಲೂಕಾಸ್ಪತ್ರೆ ಹಾಳುಕೊಂಪೆಯಂತಾಗಿದೆ. ಇದನ್ನೂ ಓದಿ: ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಭಾರತ
Advertisement
Advertisement
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ಪ್ರತಿಕ್ರಿಯಿಸಿ, ಆಸ್ಪತ್ರೆಗೆ ಪ್ರತಿದಿನ ಹೆಚ್ಚು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ದಿನಕ್ಕೆ ಸುಮಾರು ನೂರು ರೋಗಿಗಳು ದಾಖಲಾಗುತ್ತಾರೆ. ಅಲ್ಲದೇ ಆಸ್ಪತ್ರೆ ಆವರಣದಲ್ಲಿ ಜಾಗದ ಕೊರತೆಯಿರುವುದರಿಂದ ಜಾನುವಾರುಗಳು ಒಳಬರುತ್ತಿರಬಹುದು. ಕ್ಯಾಟಲ್ ಟ್ರ್ಯಾಪ್ ಹಾಕಿದ್ದರೂ, ಜಾನುವಾರು ಹೇಗೆ ಒಳಗೆ ಬರುತ್ತವೆ ಎನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನೀವು NRI?- ಪ್ರಶ್ನೆಗೆ ನಾನು HRI ಎಂದ ಆನಂದ್ ಮಹೀಂದ್ರಾಗೆ ಭಾರತೀಯರ ಚಪ್ಪಾಳೆ