ವಾಷಿಂಗ್ಟನ್: ಭಾರತ (India) ನಮ್ಮ ಮೇಲೆ ತೆರಿಗೆ (Tax) ವಿಧಿಸಿದರೆ ನಾವು ಅವರ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ವಿಧಿಸುತ್ತೇವೆ ಎಂಬ ಸಂದೇಶವನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ರವಾನಿಸಿದ್ದಾರೆ.
ಫ್ಲೋರಿಡಾ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಅವರು ನಮ್ಮ ಮೇಲೆ ತೆರಿಗೆ ವಿಧಿಸುತ್ತಾರೆ. ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ. ಆದರೆ ಇನ್ನು ಮುಂದೆ ನಾವು ತೆರಿಗೆ ವಿಧಿಸುತ್ತೇವೆ ಎಂದು ಹೇಳಿದರು.
Advertisement
ಚೀನಾದೊಂದಿಗಿನ (China) ಸಂಭಾವ್ಯ ವ್ಯಾಪಾರ ಒಪ್ಪಂದದ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದರು. ಅಮೆರಿಕ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ಕೆಲ ದೇಶಗಳಲ್ಲಿ ಭಾರತ ಮತ್ತು ಬ್ರೆಜಿಲ್ ಸೇರಿವೆ ಎಂದು ಟ್ರಂಪ್ ಹೇಳಿದರು.
Advertisement
Advertisement
ನಮಗೆ ಅಲ್ಲಿಂದ ಮೋಟಾರ್ ಸೈಕಲ್ ಬರುತ್ತೆ ನಾವು ಮೋಟಾರ್ ಸೈಕಲ್ ಕಳುಹಿಸುತ್ತೇವೆ. ಅವರು ನಮ್ಮ ಉತ್ಪನ್ನದ ಮೇಲೆ 100% ಮತ್ತು 200% ಶುಲ್ಕ ವಿಧಿಸುತ್ತಾರೆ. ಬ್ರೆಜಿಲ್ ಸಹ ಈದೇ ರೀತಿ ತೆರಿಗೆ ಹಾಕುತ್ತದೆ. ಅವರು ನಮಗೆ ಶುಲ್ಕ ವಿಧಿಸಿದರೆ ನಾವು ಅಷ್ಟೇ ಪ್ರಮಾಣದ ಶುಲ್ಕವನ್ನು ವಿಧಿಸುತ್ತೇವೆ ಎಂದು ತಿಳಿಸಿದರು.
Advertisement
ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿದ್ದ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಕಿಡಿಕಾರಿದ್ದರು. ನಾವು ಹಾರ್ಲೆಯನ್ನು ಭಾರತಕ್ಕೆ ಕಳುಹಿಸಿದರೆ ಅವರು 100% ತೆರಿಗೆ ವಿಧಿಸುತ್ತಾರೆ. ಭಾರತದವರು ಸಾಕಷ್ಟು ಸಂಖ್ಯೆಯ ಮೋಟಾರ್ ಸೈಕಲ್ ತಯಾರಿಸಿ ನಮಗೆ ಕಳುಹಿಸಿದಾಗ ಯಾವುದೇ ತೆರಿಗೆ ಇಲ್ಲ. ನಾನು ಮೋದಿ ಅವರಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ತಿಳಿಸಿದ್ದೆ ಎಂದು ಹೇಳಿದ್ದರು.
ಮಾತುಕತೆಯ ವೇಳೆ ಮೋದಿ ಕೇವಲ 75% ಆಮದು ಸುಂಕ ವಿಧಿಸುತ್ತೇವೆ ಎಂದಿದ್ದರು. ಕೆಲ ದಿನಗಳ ನಂತರ 50% ವಿಧಿಸಲಾಗುವುದು ಎಂದರು. ಆದರೆ ಭಾರತದಿಂದ ಮೋಟಾರ್ ಸೈಕಲ್ ಆಮದು ಮಾಡಿಕೊಂಡರೆ ನಮಗೆ ಸಿಗುವ ಲಾಭ 0% ಎಂದಿದ್ದರು.