ವಾಷಿಂಗ್ಟನ್: ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳು ತೆರಿಗೆ (Tax) ಕಟ್ಟದೆ ವಂಚಿಸಿದ ಆರೋಪದಡಿ ಕೋರ್ಟ್ ದಂಡ ವಿಧಿಸಿದೆ.
Advertisement
ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್‍ಗಳು ತೆರಿಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೋರ್ಟ್‍ನಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಕೋರ್ಟ್‍ನಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವುದು ಸಾಭೀತಾಗಿದೆ.
Advertisement
Advertisement
ಮ್ಯಾನ್‍ಹ್ಯಾಟನ್ ಅಪಾರ್ಟ್‍ಮೆಂಟ್‍ಗಳು ಮತ್ತು ಐಷಾರಾಮಿ ಕಾರುಗಳು ಸೇರಿದಂತೆ ಕೆಲ ಕಂಪನಿಗಳ ಮೇಲಿನ ತೆರಿಗೆಗಳನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್‍ರ ಕಂಪನಿ ತೆರಿಗೆ ವಂಚನೆ ಶಿಕ್ಷೆಗೊಳಗಾಗಿದೆ. ದಾಖಲೆಗಳನ್ನು ನಕಲು ಮಾಡಿರುವ ಆರೋಪಗಳನ್ನು ಒಳಗೊಂಡಂತೆ ಹಲವು ಆರೋಪಗಳು ಸಾಭೀತಾಗಿದ್ದು, ಟ್ರಂಪ್ ಸಂಸ್ಥೆಯಲ್ಲಿನ ಎರಡು ಕಾರ್ಪೋರೆಟ್ ಘಟಕಗಳು ತೆರಿಗೆ ವಂಚಿಸಿರುವುದಕ್ಕಾಗಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ, ಆಪ್ ಮಧ್ಯೆ ನೆಕ್ ಟು ನೆಕ್ ಫೈಟ್- ರೇಸ್‌ನಿಂದಲೇ ಕಾಂಗ್ರೆಸ್ ಔಟ್
Advertisement
ಡೊನಾಲ್ಡ್ ಟ್ರಂಪ್ ಮತ್ತು ಅವರ ವ್ಯವಹಾರಗಳ ಬಗ್ಗೆ ಮೂರು ವರ್ಷಗಳಿಂದ ತನಿಖೆ ಮುಂದುವರೆದಿದೆ. ಈ ನಡುವೆ ಇದೀಗ ಟ್ರಂಪ್ ಮೇಲೆ ವೈಯಕ್ತಿಕವಾಗಿ ಆರೋಪ ಹೊರಿಸಿಲ್ಲ. ಆದರೆ ಅವರ ಹೆಸರನ್ನು ಒಳಗೊಂಡಿರುವ ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ಗಾಲ್ಫ್ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳಿಗೆ ದಂಡ ವಿಧಿಸಿ ಶಿಕ್ಷೆ ನೀಡಲಾಗಿದೆ. ಇದು 2024ರ ಚುನಾವಣೆಗೆ ಸ್ಫರ್ದಿಸಲು ಬಯಸಿ ರಿಪಬ್ಲಿಕ್ ಪಕ್ಷದ ನಾಮನಿದೇರ್ಶನಕ್ಕಾಗಿ ಸಿದ್ಧತೆ ಆರಂಭಿಸಿರುವ ಟ್ರಂಪ್‍ಗೆ ಹಿನ್ನಡೆ ತಂದಿದೆ. ತೆರಿಗೆ ವಂಚನೆ ಪ್ರಕರಣ ಟ್ರಂಪ್‍ಗೆ ಇರಿಸುಮುರಿಸು ಉಂಟು ಮಾಡಿದೆ. ಇದನ್ನೂ ಓದಿ: ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ