ನವದೆಹಲಿ: ದೆಹಲಿ ಪಾಲಿಕೆ ಚುನಾವಣೆಯ ಮತ ಎಣಿಕೆಯಲ್ಲಿ(Delhi Municipal Election Results) ಬಿಜೆಪಿ ಮತ್ತು ಆಪ್ ಮಧ್ಯೆ ನೆಕ್ ಟು ನೆಕ್ ಫೈಟ್ ನಡೆಯುತ್ತಿದೆ.
ಒಟ್ಟು 250 ಸ್ಥಾನಗಳ ಮತ ಎಣಿಕೆ ನಡೆಯುತ್ತಿದ್ದು ಬೆಳಗ್ಗೆ 10 ಗಂಟೆಯ ಟ್ರೆಂಡ್ ಪ್ರಕಾರ ಬಿಜೆಪಿ 126, ಆಪ್ 118, ಕಾಂಗ್ರೆಸ್ 5, ಇತರರು 1 ವಾರ್ಡ್ನಲ್ಲಿ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಬಿಎಸ್ವೈಯಂತೆ ಹಿರಿಯ ನಾಯಕರು ಸ್ವಯಂ ನಿವೃತ್ತಿ ಘೋಷಿಸಲಿ
Advertisement
Advertisement
ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ದೆಹಲಿಯ ಗದ್ದುಗೆಯನ್ನು ಆಪ್(AAP) ಹಿಡಿಯಲಿದೆ ಎಂದು ಹೇಳಿದ್ದವು. ಆದರೆ ಆರಂಭಿಕ ಟ್ರೆಂಡ್ನಲ್ಲಿ ಬಿಜೆಪಿ, ಆಪ್ ಮಧ್ಯೆ ತುರುಸಿನ ಸ್ಪರ್ಧೆ ನಡೆಯುತ್ತಿದೆ.
Advertisement
2007 ರಿಂದ ಬಿಜೆಪಿ(BJP) ಪಾಲಿಕೆಯ ಅಧಿಕಾರದಲ್ಲಿದೆ. ಡಿಸೆಂಬರ್ 4 ರಂದು ಚುನಾವಣೆ ನಡೆದಿದ್ದು ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ.