ವಾಷಿಂಗ್ಟನ್: ಅಮೆರಿಕ ರಾಷ್ಟ್ರಧ್ವಜವನ್ನು (American Flag) ಸುಟ್ಟು ಹಾಕಿದರೆ, ಅಂತಹವರನ್ನು ತಕ್ಷಣವೇ ಬಂಧಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆದೇಶಿಸಿದ್ದಾರೆ.
ಧ್ವಜ ಅಪವಿತ್ರಗೊಳಿಸುವ ಕುರಿತಾದ ತನ್ನ ಕಾರ್ಯಕಾರಿ ಆದೇಶದಲ್ಲಿ, ‘ICE, ಗಡಿ ಗಸ್ತು, ಲಾ ಎನ್‌ಫೋರ್ಸ್‌ಮೆಂಟ್ ಮತ್ತು ಎಲ್ಲಾ US ಮಿಲಿಟರಿ ಎಲ್ಲರೂ ಗಮನಿಸಿ.. ಅಮೆರಿಕನ್ ಧ್ವಜವನ್ನು ಸುಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್
ಧ್ವಜ ಅಪವಿತ್ರಗೊಳಿಸುವವರನ್ನು ಶಿಕ್ಷಿಸಲು ಟ್ರಂಪ್ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು. ಈಗ ತಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ತೀಕ್ಷ್ಣಗೊಳಿಸಲು ಟ್ರಂಪ್ ಮುಂದಾಗಿದ್ದಾರೆ ಎನ್ನಲಾಗಿದೆ.
ನಮ್ಮ ದೇಶದ ಶ್ರೇಷ್ಠತೆಯ ವಿಶೇಷ ಸಂಕೇತವಾದ ಅಮೆರಿಕನ್ ಧ್ವಜವನ್ನು ಅಮೆರಿಕನ್ನರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಹಿಂಸಾಚಾರ ಮತ್ತು ಗಲಭೆಗಳನ್ನು ಪ್ರಚೋದಿಸಲು ಒಂದು ಸಾಧನವಾಗಿ ಬಳಸಲು ಅಧ್ಯಕ್ಷ ಟ್ರಂಪ್ ಅನುಮತಿಸುವುದಿಲ್ಲ ಎಂದು ಶ್ವೇತಭವನದ ವಕ್ತಾರ ಅಬಿಗೈಲ್ ಜಾಕ್ಸನ್ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಗೆ
ಟ್ರಂಪ್ ಅವರ ಈ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.