ಕುಟುಂಬ ಸಮೇತ ಬಂದು ಮತದಾನ ಮಾಡಿದ ಡಾಲಿ ಧನಂಜಯ್

Public TV
2 Min Read
Dali Dhananjay 2

ತ್ತರಕಾಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್, ಕಳೆದ ಎರಡು ವಾರಗಳಿಂದ ಅವರು ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದರು. ಉತ್ತರ ಕರ್ನಾಟದಲ್ಲಿ ನಡೆಯುತ್ತಿದ್ದ ಶೂಟಿಂಗ್ ಗೆ ಬ್ರೇಕ್ ಹಾಕಿ ಮತದಾನದ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಂಡಿದ್ದಾರೆ.

Dali Dhananjay 1

ಹೌದು, ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ ಡಾಲಿ ಧನಂಜಯ. ಪ್ರತಿ ಬಾರಿಯಂತೆ ಈ ಬಾರಿಯೂ ಕುಟುಂಬದ ಜೊತೆ ಮತದಾನ ಮಾಡಿ ಮಾದರಿಯಾಗಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ.

Srimurali 1

ಬಘೀರ ಸಿನಿಮಾದ ಶೂಟಿಂಗ್ ವೇಳೆ ಏಟು ಮಾಡಿಕೊಂಡು, ಶಸ್ತ್ರ ಚಿಕಿತ್ಸೆಯ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶ್ರೀಮುರಳಿ ತಪ್ಪದೇ ಮತಗಟ್ಟಿಗೆ ಬಂದು ಮತದಾನ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಮುರಳಿ, ‘ಮತದಾನ ನಮ್ಮ ಹಕ್ಕು ಮತ ಚಲಾಯಿಸಿದ್ದೇವೆ. ನಮ್ಮ ಬೂತ್ ಅಲ್ಲಿ ತುಂಬಾ ಜನ ಇದ್ರು, ನೋಡಿ ತುಂಬಾ ಖುಷಿ ಆಯ್ತು. ಹಿರಿಯ ನಾಗರೀಕರು ಬರ್ತಾ ಇದ್ದಾರೆ. ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಯೂತ್ ಇನ್ನೂ ಬರ್ತಿಲ್ಲ ಅಂತಾ ಅಂದರೆ ಏನು ಹೇಳಬೇಕು. ಇಂತಹ ಜವಾಬ್ದಾರಿ ಮೆರೆಯಬಾರದು.  ಇಲ್ಲೇನೂ ಎಕ್ಸಾಂ ಬರೆಸಲ್ಲ ಬಂದು ಮತದಾನ ಮಾಡಿ. ನಿಮಗೆ ಬೇಕಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಿ. ಯಾರು ಯಾರು ಓಟ್ ಮಾಡಿಲ್ಲ ಅವರಿಗೆ ಏನು ಹೇಳಬೇಕು ಮಾಧ್ಯಮ ಮುಂದೆ ಮಾತಾಡಬಾರದು’ ಎಂದಿದ್ದಾರೆ.

raghavendra rajkumar voting

ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಒಟ್ಟಾಗಿಯೇ ಬಂದು ಮತ ಚಲಾಯಿಸಿದರು. ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್, ಅವರ ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಟ್ಟಾಗಿ ಬಂದು ಮತದಾನ ಮಾಡಿದ್ದಾರೆ.

 

ಮತದಾನದ ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ‘ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದರು. ಈ ಹಿಂದೆ ಅಪ್ಪ ಅಮ್ಮನ ಜೊತೆ ಬಂದು ವೋಟು ಮಾಡುತ್ತಿದ್ದೆವು. ಆಮೇಲೆ ಅಪ್ಪು ಜೊತೆ ಬಂದೆ. ಈಗ ಒಬ್ಬೊಬ್ಬರೆ ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ಮತದಾನಕ್ಕೆ ಸಜ್ಜಾಗುತ್ತಿದೆ ಎಂದರು.

Share This Article