ನವದೆಹಲಿ: ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ (IndiGo Flight) ದಲ್ಲಿ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಕರಾಚಿಗೆ ತನ್ನ ಪಥ ಬದಲಿಸಿದ್ದು, ತುರ್ತು ಭೂಸ್ಪರ್ಶ ಮಾಡುವ ಮೊದಲೇ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
Doha bound IndiGo flight diverted to Pakistan's Karachi due to a medical emergency onboard, says an airline official to ANI. pic.twitter.com/KuVJoIJmwm
— ANI (@ANI) March 13, 2023
Advertisement
ಇಂದು ಬೆಳಗ್ಗೆ ದೆಹಲಿಯಿಂದ ಇಂಡಿಗೋ ಏರ್ ಲೈನ್ ಸಂಸ್ಥೆಯ 6ಇ-1736 ವಿಮಾನವು ಪ್ರಯಾಣ ಬೆಳೆಸಿದೆ. ವಿಮಾನ ಜರ್ನಿ ಆರಂಭವಾದ ಕೆಲ ಕ್ಷಣಗಳಲ್ಲಿ, ಪ್ರಯಾಣಿಕ ನೈಜೀರಿಯಾ ಮೂಲದ ಅಬ್ದುಲ್ಲಾ (60)ಗೆ ತೀವ್ರ ಅಸ್ವಸ್ಥತೆ ಕಾಡಿದೆ. ಈ ವೇಳೆ ವಿಮಾನವು ಪಾಕಿಸ್ತಾನದ ಕಡೆಯಿಂದ ಹಾದು ಹೋಗುತ್ತಿತ್ತು.
Advertisement
ವಿಚಾರದ ತಿಳಿದ ಕೂಡಲೇ ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದ ಪೈಲಟ್, ಅಬ್ದುಲ್ಲಾ ಅವರ ಪರಿಸ್ಥಿತಿಯನ್ನು ವಿವರಿಸಿ ತುರ್ತು ಭೂಸ್ಪರ್ಶನಕ್ಕಾಗಿ ಅನುಮತಿ ಕೋರಿದ್ದಾರೆ. ಇದನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮೋದಿಸಿ, ತುರ್ತು ಭೂಸ್ಪರ್ಶ ಮಾಡಲು ಅನುಮತಿ ನೀಡಿದ್ದಾರೆ. ಇತ್ತ ಅದಾಗಲೇ ಅಬ್ದುಲ್ಲಾ ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ವಿಮಾನವನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Karachi International Airport) ದಲ್ಲಿ ಇಳಿಸುವ ಮುನ್ನವೇ ಅಬ್ದುಲ್ಲಾ ಅಸುನೀಗಿದ್ದಾರೆ. ಇದನ್ನೂ ಓದಿ: ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು
Advertisement
Advertisement
ಇಂಡಿಗೋ ಸಂಸ್ಥೆಯಿಂದ ಪ್ರಕಟಣೆ: ದೆಹಲಿಯಿಂದ ದೋಹಾಕ್ಕೆ ಪ್ರಯಾಣಿಸುತ್ತಿದ್ದ ನಮ್ಮ ಸಂಸ್ಥೆಯ ವಿಮಾನವು ಮಾರ್ಗ ಮಧ್ಯೆ ಪಾಕಿಸ್ತಾನದ ಕರಾಚಿ ಕಡೆಗೆ ಪ್ರಯಾಣ ಬೆಳೆಸಿತು. ಇದಕ್ಕೆ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಬೇಕಾಗಿದ್ದೇ ಕಾರಣ ಎಂದು ಹೇಳಿದ್ದಾರೆ. ಆದರೆ ದುರದೃಷ್ಟವಶಾತ್ ಆ ವ್ಯಕ್ತಿಯು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವುದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ.
ತೀವ್ರ ಅಸ್ವಸ್ಥರಾಗಿದ್ದ ವ್ಯಕ್ತಿಯನ್ನು ನಮ್ಮ ಸತತ ಪ್ರಯತ್ನದ ನಡುವೆಯೂ ಉಳಿಸಿಕೊಳ್ಳಲಾಗದೇ ಹೋಗಿದ್ದು ನಮ್ಮ ದುರಾದೃಷ್ಟ. ಅವರ ಕುಟುಂಬದವರಿಗೆ ಹಾಗೂ ಅವರ ಸ್ನೇಹಿತರಿಗೆ ದುಃಖದಿಂದ ಬೇಗನೇ ಚೇತರಿಸಿಕೊಳ್ಳುವಂಥ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದು ಹಾರೈಸುತ್ತೇವೆ ಎಂದಿದೆ.