ಮಡಿಕೇರಿ: ಬಡವರ್ಗದ ಜನರ ಅರೋಗ್ಯ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಜಿಲ್ಲಾಸ್ಪತ್ರೆಗಳಿಗೆ (District Hospital) ಔಷಧಗಳನ್ನ ಸರಬರಾಜು ಮಾಡುತ್ತಿದೆ. ಆದ್ರೆ ಆ ಔಷಧಿಗಳು ಅನಾರೋಗ್ಯಪೀಡಿತರಿಗೆ ಸಿಕ್ಕುವ ಬದಲು ಆಸ್ಪತ್ರೆಯಲ್ಲೇ ಕೊಳೆಯುತ್ತಿವೆ. ಆಸ್ಪತ್ರೆಯಲ್ಲಿ ಔಷಧ ಶೇಖರಣೆಗೆ ಸೂಕ್ತ ಜಾಗವೂ ಇಲ್ಲದೇ ಸಾರ್ವಜನಿಕರು ಓಡಾಡುವ ಸ್ಥಳದಲ್ಲೇ ಔಷಧಗಳನ್ನ (Medicine) ಶೇಖರಿಸಿದ್ದು, ಈಗ ಅವು ಶ್ವಾನಗಳ ಆವಾಸಸ್ಥಾನವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ನಡೆದಿರುವುದು ಕೊಡಗು (Kodagu) ಜಿಲ್ಲಾಸ್ಪತ್ರೆಯಲ್ಲಿ.
Advertisement
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ (Madikeri) ಜಿಲ್ಲಾ ಆಸ್ಪತ್ರೆಗೆ ಹಾಸನ, ಮೈಸೂರು ಭಾಗದಿಂದಲೂ ಬಡವರ್ಗದ ಜನರು ಬರುತ್ತಾರೆ. ಚಿಕಿತ್ಸೆ ಪಡೆದ ರೋಗಿಗಳು ಉಚಿತ ಔಷಧಿ ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಈ ಆಸ್ಪತೆಯಲ್ಲಿ ರೋಗಿಗಳಿಗೆ ಕೊಡುವ ಔಷಧಿ ಆಸ್ಪತ್ರೆಯೊಳಗೆ ಮೂಲೆಗುಂಪುಗಳಾಗಿವೆ. ಸಾರ್ವಜನಿಕರು ಓಡಾಡುವ ಜಾಗದಲ್ಲೇ ಔಷಧಿಗಳು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲವಾಗಿರುವುದರಿಂದ ಔಷಧ ಬಾಕ್ಸ್‌ಗಳ ಮೇಲೆ ಫಂಗಸ್ ಬರಲು ಪ್ರಾರಂಭವಾಗಿದೆ. ಸಾಕಷ್ಟು ಬಾಕ್ಸ್‌ಗಳಿಂದ ಡ್ರಗ್ಸ್ ಲೀಕೇಜ್ ನೆಲದ ಮೇಲೆ ಹರಿಯುತ್ತಿದೆ. ಇದನ್ನೂ ಓದಿ: ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ – ಬೊಮ್ಮಾಯಿ ಟೀಕೆ
Advertisement
Advertisement
ಇಷ್ಟು ಸಾಲದ್ದಕ್ಕೆ ಔಷಧಿ ಬಾಕ್ಸ್‌ಗಳನ್ನು ಶೇಖರಣೆ ಮಾಡಿರುವ ಸ್ಥಳದಲ್ಲೇ ಈಗ ಬೀದಿ ನಾಯಿಗಳು ಆವಾಸಸ್ಥಾನ ಮಾಡಿಕೊಂಡಿವೆ. ಔಷಧ ಬಾಕ್ಸ್‌ಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಈ ಬಾರಿ 48 ಭೂಕುಸಿತ ವಲಯ ಗುರುತು – ಆಗಸ್ಟ್ ಮಳೆಗೆ ಇದ್ಯಾ ಮತ್ತೊಮ್ಮೆ ಕಂಟಕ?
Advertisement
ಮತ್ತೊಂದೆಡೆ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿರೋದ್ರಿಂದ ಆಸ್ಪತ್ರೆಯ ಡಯಾಲಿಸಸ್ ರೋಗಿಗಳು ಪರದಾಟ ನಡೆಸುವಂತಾಗಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನ ಕೇಳಿದ್ರೆ, ಬೆಲೆ ಬಾಳುವ ಔಷಧಗಳನ್ನ ಉಗ್ರಾಣ ಕೇಂದ್ರದಲ್ಲಿ ಇಡಲಾಗಿದೆ. ಇಲ್ಲಿ ಸಣ್ಣಪುಟ್ಟ ಡ್ರಗ್ಸ್‌ಗಳನ್ನ ಶೇಖರಣೆ ಮಾಡಲಾಗಿದೆ. ಆಸ್ಪತ್ರೆ ಕೊಠಡಿಗಳ ಸಮಸ್ಯೆ ಇರೋದ್ರಿಂದ ಹೀಗೆ ಆಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.
Web Stories