-ಐದು ತೊಲದ ಚಿನ್ನದ ಸರ ಗಿಫ್ಟ್
ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಸಾಕಿದ ಶ್ವಾನಕ್ಕೆ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.
ಶರಣು ಪತ್ರಿ ಎಂಬಾತ ತಮ್ಮ ಸಾಕು ಶ್ವಾನ ಟೈಗರಿನ 2ನೇ ವರ್ಷದ ಹುಟ್ಟುಹಬ್ಬವನ್ನು ಇದೇ ತಿಂಗಳ 28 ರಂದು ಭರ್ಜರಿಯಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬದ ನಿಮಿತ್ತ 500 ಜನರಿಗೆ ಭಾರೀ ಭೋಜನವನ್ನು ಕೂಡ ಹಾಕಿಸಿದ್ದಾರೆ.
ಅಷ್ಟೇ ಅಲ್ಲದೇ ಹುಟ್ಟುಹಬ್ಬದ ಅಂಗವಾಗಿ ಟೈಗರ್ ಗೆ ಐದು ತೊಲದ ಚಿನ್ನದ ಸರವನ್ನ ಶರಣು ಹಾಕಿದ್ದಾರೆ. ಟೈಗರ್ ಶ್ವಾನಕ್ಕೆ ಆರತಿ ಬೆಳಗಿ, ಐದು ಕೇಜಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಟೈಗರ್ ಹುಟ್ಟುಹಬ್ಬಕ್ಕೆ ಬಂದ ಜನರಿಗೆ ಊಟಕ್ಕಾಗಿ ಪಾಯಸ(ಸಿಹಿತಿಂಡಿ), ಪೂರಿ, ಭಾಜಿ, ರೈಸ್, ಪಾಪಡ್ ಸೇರಿದಂತೆ ವಿವಿಧ ರೀತಿಯ ಅಡುಗೆ ಮಾಡಿಸಲಾಗಿತ್ತು. ಹುಟ್ಟುಹಬ್ಬಕ್ಕೆ ಬಂದ ಜನರು ಶ್ವಾನಕ್ಕೆ ಹಾರೈಸಿ ಭೋಜನ ಸವಿದರು. ಶರಣು ವೃತ್ತಿಯಲ್ಲಿ ಬಿಎಂಟಿಸಿ ನೌಕರರಾಗಿದ್ದಾರೆ.