ಕೊಪ್ಪಳ: ಕನ್ನಡಿಗರ ಮೇಲೆ ದೌರ್ಜನ್ಯ ಮತ್ತು ರಜೆ ಸೇರಿ ತಮ್ಮ ಹಕ್ಕು ಕೇಳಿದ ಕಾರ್ಮಿಕರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ ಇಂದರಗಿ ಗ್ರಾಮದ ಸಮೀಪದ ದೊಡ್ಲ ಡೈರಿಯಲ್ಲಿ ಕೆಲಸ ಮಾಡ್ತಿದ್ದ 158 ಸ್ಥಳೀಯ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಕುಂಟು ನೆಪ ಮುಂದಿಟ್ಟುಕೊಂಡು ಸ್ಥಳೀಯರನ್ನು ಕೆಲಸದಿಂದ ತೆಗೆದು ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗಿದೆ.
ದೊಡ್ಲ ಹಾಲಿನ ಡೈರಿ ಅಧಿಕಾರಿಗಳು ಕಾರ್ಮಿಕರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಬಿಹಾರ ಮೂಲದ ಗುತ್ತಿಗೆದಾರ ಸ್ಥಳೀಯ ಕಾರ್ಮಿಕರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸುತ್ತಿದ್ದನು. ತಮಗೆ ಆಗುವ ಕಿರುಕುಳ ಪ್ರಶ್ನಿಸಿ ಕೆಲಸ ಕಳೆದುಕೊಂಡ ಕಾರ್ಮಿಕರು ಇದೀಗ ದೊಡ್ಲ ಡೈರಿ ಮುಂದೆ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ದೊಡ್ಲ ಡೈರಿ ಹೊರ ರಾಜ್ಯದ ಸಿಬ್ಬಂದಿಯನ್ನು ಕರೆದುಕೊಂಡು ಬಂದು ಕೆಲಸ ಮಾಡುತ್ತಿದ್ದಾರೆ.