ಭಾರತ ದೇಶ ತೊರೆದು, ತನ್ನದೇ ಆದ ದೇಶ ಕಟ್ಟಿಕೊಂಡು ವಾಸಿಸುತ್ತಿರುವ ಬಿಡದಿಯ ನಿತ್ಯಾನಂದ ಕುರಿತಾಗಿ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ ಮಾಡಿದೆ ಡಿಸ್ಕವರಿ ಪ್ಲಸ್ ಓಟಿಟಿ. ನಿನ್ನೆಯಷ್ಟೇ ಈ ಡಾಕ್ಯುಮೆಂಟರಿಯನ್ನು ಅದು ಬಿಡುಗಡೆ ಮಾಡಿದೆ. ಈ ಸಾಕ್ಷ್ಯ ಚಿತ್ರದಲ್ಲಿ ನಿತ್ಯಾನಂದ ನಿಜವಾಗಿಯೂ ದೇವಮಾನವನೋ ಅಥವಾ ವಂಚಕನೋ ಎನ್ನುವುದನ್ನು ಸಾದರಪಡಿಸಲಿದೆಯಂತೆ.
Advertisement
ನಿತ್ಯಾನಂದ ಕುರಿತಾಗಿ ಹಲವಾರು ಕಥೆಗಳಿವೆ. ಅವನ ಮೇಲೆ ಅತ್ಯಾಚಾರ ಆರೋಪ ಕೂಡ ಹೊರಿಸಲಾಗಿತ್ತು. ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎನ್ನುವ ಆರೋಪ ಕೂಡ ಇತ್ತು. ಅಲ್ಲದೇ, ನಟಿಯೊಬ್ಬರ ಅಶ್ಲೀಲ ವಿಡಿಯೋ ಕೂಡ ರಿಲೀಸ್ ಆಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದೆಲ್ಲವನ್ನೂ ಸಾಕ್ಷ್ಯ ಚಿತ್ರದಲ್ಲಿ ಸೆರೆ ಹಿಡಿಲಾಗಿದೆಯಂತೆ. ಇದನ್ನೂ ಓದಿ : ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್
Advertisement
Advertisement
ನಿನ್ನಯಿಂದ ಡಿಸ್ಕವರಿ ಪ್ಲಸ್ ಓಟಿಟಿಯಲ್ಲಿ ರಿಲೀಸ್ ಆಗಿರುವ ಸಾಕ್ಷ್ಯ ಚಿತ್ರಕ್ಕೆ ‘ಮೈ ಡಾಟರ್ ಜಾಯಿನ್ಡ್ ಎ ಕಲ್ಟ್’ ಎಂದು ಹೆಸರಿಡಲಾಗಿದೆ. ಮಗಳನ್ನು ಹುಡುಕಿಕೊಂಡು ಬರುವ ತಂದೆಯೊಬ್ಬ, ಮಗಳಿಗೆ ಹೇಗೆಲ್ಲ ಅನ್ಯಾಯವಾಗಿದೆ ಎನ್ನುವುದನ್ನು ಹೇಳುತ್ತಾ ಹೋಗುವ ಸಾಕ್ಷ್ಯ ಚಿತ್ರ ಇದಾಗಿದೆ ಅಂತೆ. ಒಟ್ಟು ಮೂರು ಕಂತುಗಳಲ್ಲಿ ಈ ಸಾಕ್ಷ್ಯ ಚಿತ್ರ ಪ್ರಸಾರವಾಗಲಿದೆ ಎಂದು ವಾಹಿನಿ ಹೇಳಿಕೊಂಡಿದೆ.
Advertisement
ವೈಸ್ ಮೀಡಿಯಾ ಗ್ರೂಪ್ ನ ಜಾಗತಿಕ ಉತ್ಪಾದನಾ ವಿಭಾಗವಾದ ವೈಸ್ ಸ್ಟುಡಿಯೋಸ್ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದು, ಇದಕ್ಕೆ ವಕೀಲರು, ಭಕ್ತರು, ಪತ್ರಕರ್ತರು ಹೀಗೆ ಸಾಕಷ್ಟು ಜನರು ಸಹಾಯ ಮಾಡಿದ್ದಾರಂತೆ. ಅವರೆಲ್ಲ ನೀಡಿದ ಮಾಹಿತಿಯನ್ನು ಬಳಸಿಕೊಂಡು ಈ ಸಾಕ್ಷ್ಯ ಚಿತ್ರವನ್ನು ತಯಾರು ಮಾಡಲಾಗಿದೆ ಎಂದಿದ್ದಾರೆ ಕಂಟೆಂಟ್ ವಿಭಾಗದ ಮುಖ್ಯಸ್ಥ ಸಾಯಿ ಅಭಿಷೇಕ್. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ
ಈ ಕುರಿತು ಮಾತನಾಡಿರುವ ವೈಸ್ ಸ್ಟುಡಿಯೋಸ್ ನ ಸಮೀರಾ ಕನ್ವರ್, ‘ನಿತ್ಯಾನಂದ ಸ್ವಾಮಿಯ ಬಗ್ಗೆ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಆಗದೇ, ಅಲ್ಲಿ ನಡೆದ ಘಟನೆಯನ್ನು ಹಾಗೆಯೇ ಹಸಿಹಸಿಯಾಗಿ ಕಟ್ಟಿಕೊಟ್ಟಿದ್ದೇವೆ. ದಾಖಲೆಗಳ ಸಮೇತ ವಿವರಿಸಿದ್ದೇವೆ’ ಎಂದು ಹೇಳಿದ್ದಾರೆ.