ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಸುಲಿಗೆ ರೋಗಕ್ಕೆ ಮದ್ದು ಕಂಡು ಹಿಡಿದಿದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆದ್ರೆ ಕಹಿ ಔಷಧದಿಂದ ಬೆಚ್ಚಿಬಿದ್ದಿರುವ ಆಸ್ಪತ್ರೆಗಳು ಈಗ ನೇರ ಸಮರಕ್ಕೆ ಇಳಿದಿವೆ.
ಚಿಕಿತ್ಸೆಗಳಿಗೆ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ದರ ವಿಧಿಸುವ ಹೊಸ ನಿಯಮ ವಿರೋಧಿಸಿ ಇವತ್ತು ಸಾಂಕೇತಿಕ ಪ್ರತಿಭಟನೆಗೆ ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಇವತ್ತಿನ ಮಟ್ಟಿಗೆ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ತಲೆ ಹಾಕದೇ ಇರೋದು ಒಳ್ಳೆದು. ತುರ್ತು ಚಿಕಿತ್ಸೆ ಬಿಟ್ಟರೆ ಇವತ್ತು ಖಾಸಗಿ ಆಸ್ಪತ್ರೆಯಲ್ಲಿ ಏನೂ ಸಿಗಲ್ಲ. ಆದ್ರೆ ಸರ್ಕಾರಿ ಆಸ್ಪತ್ರೆಗಳು ಸೇವೆಗೆ ಲಭ್ಯವಿರಲಿವೆ.
Advertisement
ಬೆಂಗಳೂರಿನ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‍ವರೆಗೆ ಜಾಥಾ ನಡೆಯಲಿದೆ. ಇದರಲ್ಲಿ 15 ಸಾವಿರದಷ್ಟು ಖಾಸಗಿ ವೈದ್ಯರು ಭಾಗವಹಿಸಲಿದ್ದಾರೆ. ಆದ್ರೆ ನಾವು ಸರ್ಕಾರದಿಂದ ಯಾವುದೇ ಸಹಾಯ ಪಡೆದಿಲ್ಲ. ಹೀಗಾಗಿ ನಮ್ಮನ್ನು ನಿಯಂತ್ರಿಸೋ ಅಧಿಕಾರ ಅವರಿಗಿಲ್ಲ. ಆರೋಗ್ಯ ಸಚಿವ ರಮೇಶ್ ಕುಮಾರ್‍ಗೆ ವೈದ್ಯಕೀಯ ಸಲಹೆಗಾರರ ಕೊರತೆ ಇದೆ ಅನ್ನೋದು ಖಾಸಗಿ ಆಸ್ಪತ್ರೆಗಳ ವಾದ.