ನವದೆಹಲಿ: ಮೂರು ದಿನಗಳ ಹಿಂದೆ ವೈದ್ಯೆಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈಗ ಮೂರು ದಿನಗಳ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಡಾ. ಗರೀಮಾ ಮಿಶ್ರಾ(25) ಮೃತ ವೈದ್ಯೆಯಾಗಿದ್ದು, ಡಾ. ಚಂದ್ರಪ್ರಕಾಶ್ ಕೊಲೆ ಮಾಡಿದ ಆರೋಪಿ. ಗರೀಮಾ ಮಂಗಳವಾರ ದೆಹಲಿಯ ರಂಜೀತ್‍ನಗರದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗರೀಮಾ ಶವದ ಪಕ್ಕದಲ್ಲಿ ರಕ್ತದ ಕಲೆಯಿದ್ದ ಮುರಿದು ಬಿದ್ದ ಚಾಕು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಗರೀಮಾ ಮೂಲತಃ ಉತ್ತರಪ್ರದೇಶದ ಬಾರೈಚ್‍ನವಳಾಗಿದ್ದು, ಎಂಬಿಬಿಎಸ್ ನಂತರ ಎಂಡಿ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದಿದ್ದಳು. ಡಾ. ಚಂದ್ರಶೇಖರ್ ಕೂಡ ಎಂಡಿ ಮಾಡುತ್ತಿದ್ದು, ಈ ಹಿಂದೆ ಗರೀಮಾ ಜೊತೆ ಕೆಲಸ ಮಾಡಿದ್ದನು. ಪ್ರೀತಿಗಾಗಿ ಚಂದ್ರಶೇಖರ್, ಗರೀಮಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು.
Advertisement
ಚಂದ್ರಪ್ರಕಾಶ್, ಗರೀಮಾ ಮಿಶ್ರಾಳನ್ನು ಪ್ರೀತಿಸುತ್ತಿದ್ದನು. ಆದರೆ ಗರೀಮಾ ಆತನನ್ನು ಒಳ್ಳೆಯ ಸ್ನೇಹಿತನ ರೀತಿ ನೋಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಚಂದ್ರಪ್ರಕಾಶ್, ಗರೀಮಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಗರೀಮಾ ಅಪಾರ್ಟ್ ಮೆಂಟ್‍ನ ಮೂರನೇ ಮಹಡಿಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಳು. ಆ ರೂಮಿನ ಪಕ್ಕದಲ್ಲಿದ್ದ ಮತ್ತೊಂದು ರೂಮಿನಲ್ಲಿ ವೈದ್ಯರಾದ ಚಂದ್ರಪ್ರಕಾಶ್ ಹಾಗೂ ರಾಕೇಶ್ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 11.45ಕ್ಕೆ ಗರೀಮಾಳನ್ನು ಕೊನೆಯದಾಗಿ ನೋಡಿದ್ದೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.
ಅನುಮಾನ ಬಂದಿದ್ದು ಹೇಗೆ?
ಗರೀಮಾ ಕೊಲೆಯಾದ ದಿನದಿಂದ ಆಕೆಯ ನೆರೆ ಮನೆಯಲ್ಲಿದ್ದ ವೈದ್ಯ ಚಂದ್ರಪ್ರಕಾಶ್ ವರ್ಮಾ ಕೂಡ ಕಾಣೆಯಾಗಿದ್ದನು. ಅಲ್ಲದೆ ಆತ ಮನೆಯಿಂದ ಹೊರಗೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿ ಚಂದ್ರಪ್ರಕಾಶ್‍ನನ್ನು ಪೊಲೀಸರು ಉತ್ತರಖಂಡದ ರೋರ್ಕಿಯಲ್ಲಿ ಬಂಧಿಸಿದ್ದಾರೆ.
ನಾವು ಡಾ. ಚಂದ್ರಪ್ರಕಾಶ್‍ರನ್ನು ಹಿಡಿಯಲು ಹೋಗಿದ್ದಾಗ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದನು. ನಾವು ಆತನ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್‍ನಿಂದ ಟ್ರೇಸ್ ಮಾಡಿ ರೋರ್ಕಿಗೆ ಹೋಗಿದ್ದೇವು. ಸದ್ಯ ಚಂದ್ರಪ್ರಕಾಶ್ ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಮುಂದಿನ ವಿಚಾರಣೆ ದೆಹಲಿಯಲ್ಲಿ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.