ಧಾರವಾಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಧಾರವಾಡದ (Dharwad) ಹಿರಿಯ ಅಜ್ಜರೊಬ್ಬರು ಸಾಬೀತು ಪಡಿಸಿದ್ದಾರೆ.
ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ (Dodamani Markandeya) ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್‌ಡಿ (PHD) ಮುಗಿಸಿ ಇದೀಗ ಡಾಕ್ಟರೇಟ್ (Doctorate) ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಶಿವಶರಣರ ಬಗ್ಗೆ ಅಧ್ಯಯನ ಮಾಡಿ ಪಿಎಚ್‌ಡಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು
Advertisement
Advertisement
ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಇಳಿ ವಯಸ್ಸಿನ ವೃದ್ಧರೊಬ್ಬರು ಪಿಎಚ್‌ಡಿ ಪದವಿಯನ್ನ ಪಡೆದುಕೊಂಡಿರುವುದು. ಡೋಹರ ಕಕ್ಕಯ್ಯನವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಅವರು ಬರೆದಿದ್ದು, ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ
Advertisement
Advertisement
ಈ ಅವಧಿಯಲ್ಲಿ ಅವರ ಗೈಡ್ ನಿಧನರಾದ ಹಿನ್ನೆಲೆ ಪ್ರಬಂಧ ಸಿದ್ಧಪಡಿಸಲು ವಿಳಂಬವಾಯಿತು. ಆ ನಂತರ ಡಾ.ನಿಂಗಪ್ಪ ಅವರು ಮಾರ್ಗದರ್ಶನ ಮಾಡಿದ್ದಾರೆ. ಕಾದ್ರೊಳ್ಳಿ, ಕಕ್ಕೇರಿ ಸೇರಿದಂತೆ ಇತರ ಕಡೆಗಳಲ್ಲಿ ಸಂಚರಿಸಿ ಕಕ್ಕಯ್ಯನವರ ಬಗ್ಗೆ ಅಧ್ಯಯನ ಮಾಡಿ ಮಹಾಪ್ರಬಂಧವನ್ನು ಅವರು ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ
ಡೋಹರ ಸಮುದಾಯದ ಚರಿತ್ರೆ, ಬಸವಣ್ಣನವರ ವಚನಗಳಲ್ಲಿ ಕಕ್ಕಯ್ಯನವರನ್ನು ಸ್ಮರಿಸಿಕೊಂಡಿರುವುದು, ಧಾರವಾಡ ಸಮೀಪದಲ್ಲೇ ಕಕ್ಕಯ್ಯ ಪ್ರಾಣ ಬಿಟ್ಟಿರುವುದು, ಗುಜರಾತ್, ಕಾಶ್ಮೀರ ಮತ್ತು ತಮಿಳುನಾಡು ಮೂಲದಿಂದ ಕಲ್ಯಾಣಕ್ಕೆ ಬಂದ ಶಿವಶರಣರ ನಂಟು ಇವೆಲ್ಲದರ ಮೇಲೆ ಮಾರ್ಕಂಡೇಯ ಸಮಗ್ರ ಬೆಳಕು ಚೆಲ್ಲಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್