ಮುಂಬೈ: ಕ್ಲಿನಿಕ್(Clinic) ಬಾಗಿಲನ್ನು ತೆರೆಯಲು ತಡ ಮಾಡಿದ್ದಕ್ಕೆ ಗುಂಪೊಂದು ವೈದ್ಯರಿಗೆ ಥಳಿಸಿದ ಘಟನೆ ಮಹಾರಾಷ್ಟ್ರದ(Maharashtra) ಬಾರಾಮತಿಯಲ್ಲಿ ನಡೆದಿದೆ.
ಯುವರಾಜ್ ಗಾಯಕ್ವಾಡ್ ಅವರ ಮನೆಯಿಂದ ಹೊರಗಿರುವ ಕ್ಲಿನಿಕ್‍ನಲ್ಲಿ ಈ ಘಟನೆ ನಡೆದಿದೆ. ವೈದ್ಯರು(Doctor) ಕ್ಲಿನಿಕ್‍ನ ಬಾಗಿಲನ್ನು ಸ್ವಲ್ಪ ತಡವಾಗಿ ತೆರೆದಿದ್ದರಿದ್ದಾರೆ. ಇದರಿಂದಾಗಿ ರೋಗಿಯ ಸಂಬಂಧಿಗಳು ಸೇರಿ ವೈದ್ಯರಿಗೂ ಹಾಗೂ ಅವರ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧಿಸಿ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
Advertisement
Advertisement
ಘಟನೆಗೆ ಸಂಬಂಧಿಸಿ ಗಾಯಕ್ವಾಡ್ ಕುಟುಂಬಸ್ಥರು ದೂರು ನೀಡಿದ್ದಾರೆ. ದೂರಿನಲ್ಲಿ ಗಾಯಕ್ವಾಡ್ ಅವರು, ತಮ್ಮ ಕುಟುಂಬದೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಅವರ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿರುವುದು ಕೇಳಿದ್ದಾರೆ. ಆದರೆ ಬಾಗಿಲು ತೆರೆಯಲು ತಡವಾಗಿತ್ತು. ಇದರಿಂದಾಗಿ ಗುಂಪೊಂದು ಕಿಟಕಿಯ ಗಾಜು ಒಡೆದರು. ಆದರೂ ವೈದ್ಯರು ಬಾಗಿಲನ್ನು ತೆರೆದಾಗ, ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜೀತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್ ಅವರ ಮನೆಗೆ ನುಗ್ಗಿ ಅವರನ್ನು ಥಳಿಸಲು ಪ್ರಾರಂಭಿಸಿದರು. ಇದನ್ನೂ ಓದಿ: ರಸ್ತೆ ಪಕ್ಕದ ಚರಂಡಿಗೆ ಬಿದ್ದು ಯುವತಿ ದುರ್ಮರಣ
Advertisement
कैसे- कैसे लोग…!?
बारामती के सांगवी में एक आयुर्वेदिक #Doctor ने देर से दरवाजा खोला तो मरीज के साथ आए लोगों ने डॉक्टर और उनके बेटे की जमकर पिटाई कर दी!
मालेगांव पुलिस #FIR दर्ज कर जांच कर रही है। @ndtvvideos@ndtvindia pic.twitter.com/9deiLBsopZ
— sunilkumar singh (@sunilcredible) September 11, 2022
Advertisement
ಸಿಸಿಟಿವಿಯಲ್ಲಿ ಏನಿದೆ?: ಗಾಯಕ್ವಾಡ ತಮ್ಮ ಕ್ಲಿನಿಕ್ ಬಾಗಿಲನ್ನು ತೆರೆದಿದ್ದಾರೆ. ಆಗ ಕ್ಲಿನಿಕ್‍ನೊಳಗೆ ಪ್ರವೇಶಿಸಿದ 4-5 ಮಂದಿ ಗಾಯಕ್ವಾಡ್‍ಗೆ ಹೊಡೆಯಲು ಪ್ರಾರಂಭಿಸುತ್ತಾರೆ. ಅಧೆ ಸಮಯಕ್ಕೆ ಮನೆಯಿಂದ ಹೊರ ಬಂದ ಮಗನನ್ನು ನೋಡಿ ಅವನ ಶರ್ಟ್‍ನ್ನು ಹಿಡಿದು ಅವನ ಮೇಲೂ ಹಲ್ಲೆ ನಡೆಸುತ್ತಾರೆ. ಇಬ್ಬರೂ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಅಷ್ಟೇ ಅಲ್ಲದೇ ಕೊಣೆಯಲ್ಲಿ ಇಬ್ಬರು ಮಹಿಳೆಯರು ಘಟನೆಯನ್ನು ವೀಕ್ಷಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನೆಗೆ ಸಂಬಂಧಿಸಿ ಮಾಲೆಗಾಂವ್ ಪೊಲೀಸರು ವೈದ್ಯರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ