ಚಿಕ್ಕಮಗಳೂರು: ಕುಡಿದು ಬಂದು ಆಪರೇಷನ್ ಥಿಯೇಟರ್‌ನಲ್ಲಿ (Operation Theater) ಮಲಗಿದ್ದ ವೈದ್ಯನನ್ನು (Doctor) ಬಚಾವ್ ಮಾಡಿಸುವ ಸಲುವಾಗಿ ಸಿಬ್ಬಂದಿ ವಿಷ್ಣುಸೇನಾ ಚಿತ್ರದ ಪಾರ್ಟ್ 2 ಕಥೆ ಹೆಣೆದ ಘಟನೆ ಚಿಕ್ಕಮಗಳೂರಿನ (Chikkamagaluru) ಕಳಸ (Kalasa) ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ (Castration) ಕ್ಯಾಂಪ್ ಏರ್ಪಾಡು ಮಾಡಿದ್ದು, ಮಹಿಳೆಯರಿಗೆ ಬುಧವಾರ ಬೆಳಗ್ಗೆ 8 ಗಂಟೆಗೆ ಬರಲು ಹೇಳಿದ್ದರು. ಕ್ಯಾಂಪ್‌ಗೆ 10ಕ್ಕೂ ಹೆಚ್ಚು ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಬೆಳಗ್ಗೆ 8 ಗಂಟೆಗೆ ಬಂದಿದ್ದರು. ಆಪರೇಷನ್ ಮಾಡುವ ಸಲುವಾಗಿ ಕೊಪ್ಪ (Koppa) ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು 3 ಗಂಟೆಗೆ ಬಂದಿದ್ದ. ಬರುತ್ತಲೇ ಫುಲ್ ಟೈಟ್ ಆಗಿದ್ದ ಈತ ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಆಪರೇಷನ್ ಬೆಡ್ ಮೇಲೆ ಮಲಗಿದ್ದಾನೆ. ಇದರಿಂದಾಗಿ ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರು ರೆಬಲ್ ಆಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲೂ ʻಗ್ಯಾರಂಟಿʼ ಗಲಾಟೆ – ವಿದ್ಯುತ್ ಬಿಲ್ ಕೇಳಿದ ಸಿಬ್ಬಂದಿ ಮೇಲೆ ಕೋಳಿ ಅಂಗಡಿ ಮಾಲೀಕನಿಂದ ಹಲ್ಲೆ
Advertisement
Advertisement
ಈ ವೇಳೆ ಸಿಬ್ಬಂದಿ ವೈದ್ಯರಿಗೆ ಏನೋ ಆಗಿದೆ. ಶುಗರ್ ಕಡಿಮೆ ಆಗಿದೆ, ಬಿಪಿ ಜಾಸ್ತಿ ಆಗಿದೆ ಎಂದು ವಿಷ್ಣುಸೇನಾ ಚಿತ್ರದ ಪಾರ್ಟ್ 2 ಸನ್ನಿವೇಶ ಸೃಷ್ಟಿಸಿ ಹೈಡ್ರಾಮಾ ಮಾಡಿದ್ದಾನೆ. ಅಲ್ಲದೇ ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ವಾಪಸ್ ಕೊಪ್ಪಕ್ಕೆ ಕಳುಹಿಸಲಾಗಿದೆ. ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರಿಗೆ ಆಸ್ಪತ್ರೆ ಸಿಬ್ಬಂದಿ ಗ್ಲೂಕೋಸ್ ಹಾಕಿದ್ದಾರೆ. ಗುರುವಾರ ಮತ್ತೆ ಬೇರೆ ವೈದ್ಯರನ್ನು ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ. ವಿಷ್ಣುಸೇನಾ ಚಿತ್ರದ ಪಾರ್ಟ್ 2 ಕಥೆ ಹೆಣೆದ ಸಿಬ್ಬಂದಿ ವಿರುದ್ಧ ಜನರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಬಿರುಗಾಳಿ ಮಳೆಗೆ ಧರೆಗುರುಳಿದ ಮರ, ಮುರಿದ ವಿದ್ಯುತ್ ಕಂಬ – ಗೊಮ್ಮಟೇಶ್ವರ ದೇವಸ್ಥಾನದ ಛಾವಣಿಗೂ ಹಾನಿ
Advertisement