ಬೆಂಗಳೂರು: ಸ್ಕಿನ್ ಬ್ಯಾಂಕ್‍ನಿಂದ ಸ್ಕಿನ್ ತರಿಸಿ ಸರ್ಜರಿ ನಡೆಸಬೇಕಿದೆ ಎಂದು ಆ್ಯಸಿಡ್ ಸಂತ್ರಸ್ತೆಯ ಚಿಕಿತ್ಸೆ ಕುರಿತು ಸೇಂಟ್ ಜಾನ್ಸ್ ವೈದ್ಯರ ತಂಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಸಿಡ್ ಸಂತ್ರಸ್ತೆ ಮೂರು ದಿನಗಳ ಹಿಂದೆ ದಾಖಲಾಗಿದ್ದಾರೆ. ಆ್ಯಸಿಡ್ ದಾಳಿಯಿಂದ ಶೇ. 36ರಷ್ಟು ದೇಹದ ಹಲವು ಭಾಗಗಳು ಸುಟ್ಟಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಆದರೆ ನಮ್ಮ ತಂಡವು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇವೆ ಎಂದರು.
Advertisement
Advertisement
ಸಂತ್ರಸ್ತೆಯನ್ನು ಪ್ಲಾಸ್ಟಿಕ್ ಸರ್ಜರಿ ತಂಡವು ನೋಡಿಕೊಳ್ಳುತ್ತಿದೆ. ಅವರಿಗೆ ಹಂತ ಹಂತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಮುಖ, ಕೈ ಕಾಲುಗಳ ಮೇಲೆ ಗಾಯಗಳಾಗಿದೆ. ಇದರಿಂದಾಗಿ ಅನೇಕ ಸರ್ಜರಿಗಳಾಗಬೇಕಿದೆ. ಕ್ರಮೇಣವಾಗಿ ಸ್ವಂತ ಚರ್ಮದಿಂದ ಕವರ್ ಆಗಬೇಕಾಗುತ್ತದೆ. ಚಿಕಿತ್ಸೆ ಮುಗಿಯಲು ಸರಿಸುಮಾರು 2 ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP
Advertisement
Advertisement
ಆ್ಯಸಿಡ್ ದಾಳಿ ಆಗಿರುವುದರಿಂದ ದೇಹದಲ್ಲಿ ಡೀಪ್ ಗಾಯಗಳಾಗಿದೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆಕೆಗೆ ಕಾನ್ಶಿಯಸ್ ಇದೆ. ಯುವತಿ ಮಾತನಾಡುತ್ತಿದ್ದಾಳೆ. ವೈದ್ಯರ ತಂಡ ನಿರಂತರವಾಗಿ ಯುವತಿಯ ಚಿಕಿತ್ಸೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ನಕಲಿ ಎಸಿಬಿ ಹಾವಳಿ – ದಾಳಿ ನಡೆಸದೇ ಬಿ-ರಿಪೋರ್ಟ್ ಹಾಕಲು ಲಕ್ಷಾಂತರ ರೂ. ಬೇಡಿಕೆ