ಸಾಮಾನ್ಯವಾಗಿ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಸಿನಿಮಾಗಳಿಗೆ ಹೋಗುವಾಗ ನಿರೀಕ್ಷೆ ಹೆಚ್ಚಾಗಿಯೇ ಇರುತ್ತದೆ. ಇದು ಅಪ್ಪು ಅವರ ಕೊನೆಯ ಸಿನಿಮಾವಾಗಿದ್ದರಿಂದ ಜಾಸ್ತಿಯೇ ನಿರೀಕ್ಷೆ ಇತ್ತು. ಅದನ್ನು ನಿರ್ದೇಶಕ ಚೇತನ್ ಕುಮಾರ್ ಹುಸಿಗೊಳಿಸಿಲ್ಲ.
Advertisement
ಸಿನಿಮಾ ಶುರುವಾಗೋದು ಕಾರೊಂದರ ಚೇಸಿಂಗ್ ಮೂಲಕ. ಜೀವದ ಹಂಗುತೊರೆದು ಈ ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದಾರೆ ಪವರ್ ಸ್ಟಾರ್. ಪುನೀತ್ ರಾಜ್‍ಕುಮಾರ್ ಎಂಟ್ರಿ ಜಭರ್ದಸ್ತ್ ಆಗಿದೆ. ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಅಪ್ಪು, ಇನ್ನೂ ನೂರು ಕಾಲ ಇರಬೇಕಿತ್ತು, ಇಂತಹ ಇನ್ನಷ್ಟು ಸಿನಿಮಾಗಳನ್ನು ಕೊಡಬೇಕಿತ್ತು ಅಂತ ಅನಿಸದೇ ಇರದು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯ್ಯಾಕ್ಷನ್
Advertisement
Advertisement
ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾದಲ್ಲಿ ಸಂತೋಷ್ ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ನಾಯಕ ಸಂತೋಷ ಸೆಕ್ಯುರಿಟಿ ಏಜೆನ್ಸಿ ಇಟ್ಟುಕೊಂಡಿರುವ ಅಪ್ಪಟ ದೇಶಪ್ರೇಮಿ. ಇವನ ಅಸಲಿ ಕೆಲಸ ಸೆಕ್ಯುರಿಟಿ ಏಜೆನ್ಸಿ ನಡೆಸೋದು ಅಂದುಕೊಂಡರೆ ತಪ್ಪಾಗತ್ತೆ. ಅವನು ಡ್ರಗ್ಸ್ ಮಾಫಿಯಾ ವಿರುದ್ಧ ತಿರುಗಿಬೀಳುತ್ತಾನೆ. ಅದು ಅಂತಿಂತ ಡ್ರಗ್ಸ್ ಮಾಫಿಯಾ ಅಲ್ಲ, ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆ. ಇದರ ಮೂಲ ಬೇರು ಹುಡುಕಾಟದಲ್ಲಿ ಸಾಕಷ್ಟು ಖಳರನ್ನು ಎದುರು ಹಾಕಿಕೊಳ್ಳುತ್ತಾನೆ. ಹೀಗೆ ಮೊದಲರ್ಧದ ಕಥೆ ಸಾಗುತ್ತದೆ.
Advertisement
ಇನ್ನೇನು ದ್ವಿತೀಯಾರ್ಧಕ್ಕೆ ಸಿನಿಮಾ ಶುರುವಾಗುತ್ತದೆ ಅನ್ನುವಷ್ಟರಲ್ಲಿ ಸಿನಿಮಾದಲ್ಲೊಂದು ಟ್ವಿಸ್ಟ್ ಇದೆ. ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದ ಸಂತೋಷ್ ಸಡನ್ನಾಗಿ ಸೈನಿಕನ ಅವತಾರ ತಾಳುತ್ತಾನೆ. ಇದೇ ಅಸಲಿ ಕಹಾನಿ. ಸೆಕ್ಯುರಿಟಿ ಏಜೆನ್ಸಿ, ಸೈನಿಕ, ಸಂತೋಷ್ ಮತ್ತು ಡ್ರಗ್ಸ್ ಮಾಫಿಯಾ ಬೆನ್ನು ಬೀಳುವ ವಿಶಿಷ್ಟ ಕಥೆಯನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ.
ಇಡೀ ಪವರ್ ಪ್ಯಾಕ್ ಸಿನಿಮಾದಲ್ಲಿ ಅಲ್ಲಲ್ಲಿ ಕಾಮಿಡಿ ಕಚಗುಳಿ ಇಟ್ಟಿದ್ದಾರೆ ಸಾಧುಕೋಕಿಲಾ. ಆದರೆ, ಬಹುತೇಕ ಸಿನಿಮಾವನ್ನು ಆವರಿಸಿಕೊಂಡಿದ್ದು ಪುನೀತ್ ರಾಜ್ ಕುಮಾರ್. ಇವರ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ಹೊಂದುತ್ತಾ ಅನ್ನುವ ಆತಂಕವಿತ್ತು. ಅಪ್ಪು ಶರೀರಕ್ಕೆ ಶಿವಣ್ಣನ ಶಾರೀರ ಪರ್ಫೆಕ್ಟ್ ಮ್ಯಾಚ್ ಆಗಿದೆ. ಇದನ್ನೂ ಓದಿ: ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?
ಆದರೆ ಅಪ್ಪು ಇಲ್ಲ ಅನ್ನುವ ಬೇಸರ ಇದ್ದೇ ಇರುತ್ತದೆ. ಅದನ್ನು ತಡೆದುಕೊಂಡೆ ಸಿನಿಮಾ ನೋಡಬೇಕಾಗುತ್ತದೆ.