ಡಾ.ಪುನೀತ್ ರಾಜ್‌ಕುಮಾರ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ ‘ಜೇಮ್ಸ್’ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಈ ಶುಭದಿನ ಅಪ್ಪು ಕನಸಿನ ಚಿತ್ರ ‘ಗಂಧದಗುಡಿ’ಯ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಸುದ್ದಿ ತಿಳಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಡಬಲ್ ಧಮಾಕದಂತೆ ಕುಣಿದು ಕುಪ್ಪಳಿಸುತ್ತಿದ್ದಾರೆ.
ಅಪ್ಪುನನ್ನು ಮತ್ತೆ ಬರಮಾಡಿಕೊಳ್ಳಲು ಅಭಿಮಾನಿಗಳು ತಿಂಗಳುಗಳಿಂದ ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಕೊನೆಗೂ ಅವರ ಕನಸಿನ ದಿನ ಎಂಬಂತೆ ಅಪ್ಪು ಹುಟ್ಟಿದ ದಿನ ಬಂದಿದೆ. ಹಾಗಾಗಿ ತಮ್ಮ ಇಷ್ಟದ ರಾಜಕುಮಾರನನ್ನು ನಾನಾ ರೀತಿಯಲ್ಲಿ ಬರಮಾಡಿಕೊಂಡ ಪ್ರೇಕ್ಷಕರು ಸಿನಿಮಾವನ್ನು ಸಿನಿಮಾದ ರೀತಿ ನೋಡದೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ
View this post on Instagram
ಈ ಜೊತೆಗೆ ಅಪ್ಪು ಕನಸಿನ ಪ್ರಾಜೆಕ್ಟ್ ‘ಗಂಧದಗುಡಿ’ ಫಸ್ಟ್ ಲುಕ್ ಅನ್ನು ಪಿಆರ್‌ಕೆ ಪ್ರೊಡೆಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದು, ಈ ದಿನದಂದು ನಾವು ನಮ್ಮ ಪ್ರೀತಿಯ ಅಪ್ಪುವಿನ ಹುಟ್ಟುಹಬ್ಬವನ್ನು ಅವರು ಪ್ರೀತಿಸುವ ಭೂಮಿ, ಜೀವಿಗಳು, ಸಾಹಸ ಮತ್ತು ಅದ್ಭುತ ಪ್ರಜ್ಞೆ ಮೂಲಕ ಸ್ವಾಗತ ಮಾಡಿಕೊಳ್ಳುತ್ತಿದ್ದೇವೆ ಎಂದು ಇನ್‌ಸ್ಟಾದಲ್ಲಿ ಬರೆದು ಅಪ್ಪು ಲುಕ್ ರಿವಿಲ್ ಮಾಡಿದ್ದಾರೆ.
ಈ ಫೋಟೋದಲ್ಲಿ ನಗುಮುಖದ ಅಪ್ಪು ಪ್ರಕೃತಿಯನ್ನು ವೀಕ್ಷಿಸುತ್ತ ಜರಿ ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದಾರೆ. ಪ್ರಕೃತಿ ಸೂಬಗಿನ ಮಧ್ಯೆ ಅಪ್ಪು ಅಮರ ಎಂಬಂತೆ ಈ ಫೋಟೋ ಇದೆ. ಈ ಫೋಟೋ ನೋಡಿದ ಅಭಿಮಾನಿಗಳು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಅಪ್ಪು ಅವರಂತಹ ವ್ಯಕ್ತಿ ಮತ್ತೆ ಹುಟ್ಟಿಬರುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಡಾ.ಪುನೀತ್ ರಾಜ್‌ಕುಮಾರ್ ಎಂದು ಹೇಳಿ ಅಂತ ಕಾಮೆಂಟ್ ಮಾಡುವ ಮೂಲಕ ಅವರ ಅಭಿಮಾನವನ್ನು ತೋರಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯ್ಯಾಕ್ಷನ್