ವಿಜಯಪುರ: ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ಕೆಲ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಹಣವನ್ನ ಮಾತ್ರ ದೋಚಿ ನಂತರ ರೋಗಿಗಳು ಪರದಾಡುವಂತೆ ಮಾಡುತ್ತಾರೆ. ಅದೇ ರೀತಿ ವಿಜಯಪುರದಲ್ಲಿ ಕಣ್ಣನ್ನು ತೋರಿಸಲು ಬಂದ ರೋಗಿಯ ಕಣ್ಣೆ ಕಾಣದಂತೆ ವೈದ್ಯ ಯಡವಟ್ಟು ಮಾಡಿದ್ದಾನೆ.
ವಿಜಯಪುರದ ವಜ್ರ ಹನುಮನ ಬಡಾವಣೆಯ ನಿವಾಸಿಯಾದ ವೃದ್ಧ ರಂಗಪ್ಪ ಕೆಂಗಾರ್ ನಗರದ ವೈದ್ಯ ಕಣ್ಣು ತಜ್ಞ ಆನಂದ ಕಣಬೂರ ಹತ್ತಿರ ಕಣ್ಣು ಸರಿಯಾಗಿ ಕಾಣುತ್ತಿಲ್ಲವೆಂದು ಹೇಳಿದ್ದಾನೆ. ಆಗ ವೈದ್ಯ ಆನಂದ ರಂಗಪ್ಪಗೆ ಕಣ್ಣನಿಲ್ಲಿ ಪೊರೆ ಬಂದಿದೆ ಆಪರೇಷನ್ ಮಾಡಬೇಕೆಂದು ಹೇಳಿ ಆಪರೇಷನ್ ಮಾಡಿದ್ದಾನೆ. ಆದರೆ ಅದ್ಯಾಕೋ ಗೊತ್ತಿಲ್ಲ ಆಪರೇಷನ್ ಆದ ನಂತರ ರಂಗಪ್ಪ ಅವರ ಕಣ್ಣು ಕಾಣಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರಂಗಪ್ಪರ ಮಗ ಪ್ರಭು ವೈದ್ಯ ಆನಂದ ರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ತನ್ನ ತಪ್ಪನ್ನು ವೈದ್ಯ ಆನಂದ್ ಒಪ್ಪಿಕೊಂಡು ಮಾಧ್ಯಮಗಳಿಗೆ ಹೋಗದಂತೆ ಅಂಗಲಾಚಿದ್ದಾರೆ. ಆದರೆ ರಂಗಪ್ಪ ಮತ್ತೆ ಕುಟುಂಬಸ್ಥರು ನಿಮಗೆಷ್ಟು ಹಣ ಬೇಕು ಕೇಳಿ ಕೊಡುತ್ತೇವೆ ಆದರೆ ನನ್ನ ಕಣ್ಣು ಮರುಕಳಿಸಿ ಎಂದು ಅಂಗಲಾಚುತ್ತಿದ್ದಾರೆ. ಇನ್ನು ಗಾಂಧಿಚೌಕ ಠಾಣೆಯಲ್ಲಿ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ರಂಗಪ್ಪರ ಕುಟುಂಬ ಮುಂದಾಗಿದೆ.
ರಂಗಪ್ಪರನ್ನು ಕೇಳಿದರೆ ಕಣಬೂರ ಡಾಕ್ಟರ್ ನನ್ನ ಕಣ್ಣು ತೆಗೆದು ಕಾಣದಂತಹ ಬೇರೊಂದು ಕಣ್ಣು ಹಾಕಿದ್ದಾನೆ. ಗಂಡ ಮಾಡಿರುವ ತಪ್ಪುಗಳಿಗೆ ಪತ್ನಿಯ ಸಹಕಾರ ಕೂಡಾ ಇದೆ. ಇಂತಹ ಘಟನೆಗಳು ನಡೆದಾಗ ಡಾಕ್ಟರ್ ಪತ್ನಿ ಲಕ್ಷ್ಮಿ ಅವರ ಕುಟುಂಬಗಳಿಗೆ ಕಾಲ್ ಮಾಡಿ ವ್ಯವಹಾರ ಸೆಟಲ್‍ಮೆಂಟ್ ಮಾಡುತ್ತಾಳೆ ಎಂದು ರಂಗಪ್ಪ ಕುಟುಂಬಸ್ಥರು ಆರೋಪ ಮಾಡಿದ್ದಾರೆ.