ಉತ್ತಮ ಆರೋಗ್ಯಕ್ಕಾಗಿ ಗೋ ಶಾಲೆಯಲ್ಲಿ ವೈದ್ಯರೊಬ್ಬರು ಸಗಣಿ ತಿನ್ನುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಸಾಮಾನ್ಯವಾಗಿ ಹಸುವಿನ ಸಗಣಿ ಮತ್ತು ಮೂತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಹೊಂದಿದೆ ಎಂದು ಭಾರತೀಯರು ನಂಬಿದ್ದಾರೆ. ಆದರೆ ವಿಜ್ಞಾನ ಬೇರೆ ರೀತಿಯೇ ಹೇಳುತ್ತದೆ. ಈ ನಡುವೆ ಮನೋಜ್ ಮಿತ್ತಲ್ ಎಂಬ ವೈದ್ಯರೊಬ್ಬರು ಹಸುವಿನ ಸಗಣಿ ತಿನ್ನುತ್ತಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ
Advertisement
Dr Manoj mittal MBBS MD pic.twitter.com/NEEDS0zwlc
— Dr Manoj Mittal (@DrMANOJMittal2) June 27, 2020
Advertisement
ವೀಡಿಯೋದಲ್ಲಿ ಡಾ. ಮನೋಜ್ ಮಿತ್ತಲ್ ಅವರು, ನೆಲದ ಮೇಲಿದ್ದ ಹಸುವಿನ ಸಗಣಿಯನ್ನು ತೆಗೆದುಕೊಂಡು ಅದನ್ನು ಬಾಯಿಗೆ ಹಾಕಿಕೊಂಡು ಸವಿಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಗೋ ಮೂತ್ರ ಹಾಗೂ ಹಸುವಿನ ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ದೂರವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ದುನಿಯಾ ವಿಜಯ್‍ಗೆ ಪಿತೃ ವಿಯೋಗ
Advertisement
Dr. Manoj Mittal MBBS MD’s prescription. Via @ColdCigar pic.twitter.com/SW2oz5ao0v https://t.co/Gzww80KiSs
— Rofl Gandhi 2.0 ???????? (@RoflGandhi_) November 16, 2021
ಹೆಂಗಸರಿಗೆ ನಾರ್ಮಲ್ ಡೆಲಿವರಿ ಆಗಬೇಕೆಂದರೆ ಹಸುವಿನ ಸಗಣಿ ಸೇವಿಸಬೇಕು ಇದರಿಂದ ಸಿಸೇರಿಯನ್‍ಗೆ ಆಗುವುದನ್ನು ತಪ್ಪಿಸಬಹುದು ಎಂದಿದ್ದಾರೆ. ಜೊತೆಗೆ ಗೋವಿನಿಂದ ಸಿಗುವ ಪಂಚಗವ್ಯದ ಪ್ರತಿಯೊಂದು ಭಾಗವೂ ಮನುಕುಲಕ್ಕೆ ಅತ್ಯಮೂಲ್ಯವಾದದ್ದು, ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಅದು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ
I respectfully propose that @narendramodi ji appoint him as Minister of Health!
The use of cow dung and pee in the treatment should be mandatory. All pharmaceutical companies should be buldozed. pic.twitter.com/Iaczs3XVJA
— Faizul Hasan (@hasanfaizulkhan) November 17, 2021
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವೈದ್ಯರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ವೈದ್ಯರ ಹೇಳಿಕೆಗಳನ್ನು ಕೆಲವರು ಒಪ್ಪಿದರೆ, ಮತ್ತೆ ಕೆಲವರು ಅವರ ಪದವಿಯನ್ನು ಪ್ರಶ್ನಿಸಿ, ಅಪಹಾಸ್ಯ ಮಾಡಿದ್ದಾರೆ.