ಗಾಂಧಿನಗರ: ವೈದ್ಯನೊಬ್ಬ ವರದಕ್ಷಿಣೆ ತರುವಂತೆ ಹಿಂಸಿಸಿದ್ದಲ್ಲದೇ ಪತ್ನಿ ಹಾಗೂ ತನ್ನ 7 ವರ್ಷದ ಮಗಳನ್ನೇ ಮನೆಯಿಂದ ಹೊರಹಾಕಿದ ಘಟನೆಯೊಂದು ಗುಜರಾತ್‍ನ ಅಹಮ್ಮದಾಬಾದ್‍ನಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ವೈದ್ಯ 2011ರಲ್ಲಿ ಮದುವೆಯಾಗಿದ್ದಾನೆ. ಮೊದ ಮೊದಲು ಪತ್ನಿ ಜೊತೆ ಚೆನ್ನಾಗಿಯೇ ಇದ್ದ ಆತ, ನಂತರ ತನ್ನ ಹೆತ್ತವರ ಜೊತೆ ಸೇರಿಕೊಂಡು ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದಾನೆ. ಈ ಮಧ್ಯೆ ದಂಪತಿಗೆ ಹೆಣ್ಣು ಮಗು ಕೂಡ ಜನಿಸಿತ್ತು. ಆ ಬಳಿಕವಂತೂ ಆತ ಪತ್ನಿಯನ್ನು ಮತ್ತಷ್ಟು ಪೀಡಿಸಲು ಶುರು ಮಾಡಿದ. ಇದನ್ನೂ ಓದಿ: ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?
ಇತ್ತ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆತ 2014ರಲ್ಲಿ ತಮಿಳುನಾಡಿನ ತಂಜಾವೂರಿಗೆ ಶಿಫ್ಟ್ ಆದ. ಈ ವೇಳೆ ಪತ್ನಿ ಕೂಡ ಪತಿ ಜೊತೆಗೇ ತೆರಳಿದ್ದಾಳೆ. ಆದರೆ ಅಲ್ಲಿ ಆತ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ. ಈ ವಿಚಾರ ಪತ್ನಿ ಗಮನಕ್ಕೆ ಬಂದಿದೆ. ಕೂಡಲೇ ಈ ಕುರಿತು ಪತಿಯನ್ನು ಪ್ರಶ್ನೆ ಮಾಡಿದಳು. ಇದರಿಂದ ಸಿಟ್ಟಿಗೆದ್ದ ವೈದ್ಯ, ಪತ್ನಿಯನ್ನು ಚೆನ್ನಾಗಿ ಥಳಿಸಿದ್ದಾನೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ
ಪತಿಯ ಹಿಂಸೆ ತಾಳಲಾರದೆ ಪತ್ನಿ ತನ್ನ ತವರಿಗೆ ತೆರಳಿದಳು. ಆದರೆ ತವರು ಮನೆಯವರು ಅವಳ ಮನಸ್ಸನ್ನು ಪರಿವರ್ತನೆ ಮಾಡಿ, ಇಬ್ಬರನ್ನು ಬಲವಂತವಾಗಿ ಹೊಂದಾಣಿಕೆ ಮಾಡಿಸಿ ಮತ್ತೆ ಪತಿ ಬಳಿ ಕಳುಹಿಸಿದ್ದಾರೆ. 2020ರಲ್ಲಿ ಮತ್ತೆ 20 ಲಕ್ಷ ಹಣ ತರುವಂತೆ ಬೇಡಿಕೆ ಇಟ್ಟ. ಆಸ್ಪತ್ರೆ ಕಟ್ಟಿಸಬೇಕು ಹಣ ಬೇಕು, ತವರಿಂದ ಹಣ ತರುವಂತೆ ತಿಳಿಸಿದ್ದಾನೆ. ಅಂತೆಯೇ ಪತ್ನಿ ತನ್ನ ತವರು ಮನೆಯಲ್ಲಿ ಹಣ ಕೇಳಿದ್ದಾಳೆ. ಆದರೆ ಅವರು ಹಣ ಕೊಡಲು ಒಪ್ಪಲಿಲ್ಲ. ಇದರಿಂದ ರೊಚ್ಚಿಗೆದ್ದ ವೈದ್ಯ ತನ್ನ ಪತ್ನಿ ಹಾಗೂ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ.
ಸದ್ಯ ಪತ್ನಿ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದಾಳೆ.