ಬೆಳಗಾವಿ: ದೇಶದಲ್ಲಿ ಹಿಂದೂ ಮುಸ್ಲಿಂ ಯಾರೇ ಇರಬಹುದು ಅಣ್ಣ-ತಮ್ಮಂದಿರ ಹಾಗೆ ಬದುಕಬೇಕು. ಅದನ್ನು ಬಿಟ್ಟು ನಾನೂ ಹಿಂದೂ ಇದೀನಿ ಅಂತ ಕೊಲೆ ಮಾಡಬೇಕೆಂಬುದು ಯಾವ ನ್ಯಾಯ? ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರಶ್ನಿಸಿದ್ದಾರೆ.
Advertisement
ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್‌ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಂದೂ ಎಂಬ ಒಂದೇ ಕಾರಣಕ್ಕೆ ಅವನ ಹತ್ಯೆ ಮಾಡಬೇಕು ಎಂಬುದು ಸರಿಯಲ್ಲ. ಯಾವುದೇ ಸಮಾಜ ಇದ್ದರೂ ಆ ಸಮಾಜ ತಿದ್ದುಕೊಳ್ಳಬೇಕು. ನಾನು ಹಿಂದೂ ಇದೀನಿ ಅಂತಾ ಕೊಲೆ ಮಾಡಬೇಕೆಂಬುದು ಯಾವ ನ್ಯಾಯ, ಇದು ಸರಿಯಾದುದಲ್ಲ ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಯಾರಿಗೂ ಅರ್ಧ ಕಪ್ ಚಹಾ ಸಹ ಕುಡಿಸಿಲ್ಲ: ಮುನೇನಕೊಪ್ಪ
Advertisement
Advertisement
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹಿಂದೂ ಇರಬಹುದು, ಮುಸ್ಲಿಂ ಇರಬಹುದು ಈ ದೇಶದಲ್ಲಿ ವಾಸಿಸುವವ ಪ್ರತಿಯೊಬ್ಬರೂ ಅಣ್ಣತಮ್ಮಂದಿರ ರೀತಿ ಬದುಕಬೇಕು. ಧರ್ಮ ಗುರುಗಳಿಂದ ಸಮಾಜ ಪರಿವರ್ತನೆಯ ಕೆಲಸಗಳಾಗಬೇಕು. ಸಾಮರಸ್ಯದಿಂದ ಬದುಕುವಂತೆ ಸಮಾಜ ಕಟ್ಟಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಂಪುಟ ವಿಸ್ತರಣೆ ಕಸರತ್ತು: ನಾಳೆ ದೆಹಲಿಗೆ ಸಿಎಂ
Advertisement
ಈ ರೀತಿ ಒಂದು ಸಮಾಜ ಗುರಿಯಾಗಿಸುವುದನ್ನು ಯಾರೂ ಸಹಿಸೋದಿಲ್ಲ. ಸರ್ಕಾರ ಸಹ ಕಾನೂನಿನ ಕ್ರಮಗಳು ಏನಿದೆ? ನೋಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ತಿಳಿಸಿದ್ದಾರೆ.