Bengaluru CityKarnatakaLatestLeading NewsMain Post

ಸಂಪುಟ ವಿಸ್ತರಣೆ ಕಸರತ್ತು: ನಾಳೆ ದೆಹಲಿಗೆ ಸಿಎಂ

ಬೆಂಗಳೂರು: ಸಂಪುಟ ವಿಸ್ತರಣೆ ಕಸರತ್ತಿಗಾಗಿ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳಲಿದ್ದಾರೆ.

ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಡಲಿರುವ ಬೊಮ್ಮಾಯಿ ದಿನವಿಡೀ ವಿವಿಧ ಕೇಂದ್ರ ಸಚಿವರು, ಪಕ್ಷದ ರಾಷ್ಟ್ರೀಯ ನಾಯಕನ್ನು ಭೇಟಿಯಾಗಿ ಸಂಪುಟ ಸರ್ಕಸ್ ಕುರಿತು ಚರ್ಚಿಸಲಿದ್ದಾರೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

ಸಂಜೆ ಬಂಡವಾಳ ಹೂಡಿಕೆದಾರರ ಸಮ್ಮೇಳನದ ಪೂರ್ವಭಾವಿಯಾಗಿ ವಿದೇಶಿ ಗಣ್ಯರ ಭೇಟಿ ಮಾಡಿ ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ, ರಾತ್ರಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

ಬುಧವಾರ ಮಧ್ಯಾಹ್ನ ಅಥವಾ ಸಂಜೆ ಸಿಎಂ ಬೆಂಗಳೂರಿಗೆ ವಾಪಾಸ್ಸಾಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಗುರುವಾರ ಅಥವಾ ಶುಕ್ರವಾರ ಸಂಪುಟ ಪುನರ್ರಚನೆ ಆಗುವ ಸಾಧ್ಯತೆ ಇದೆ.

Leave a Reply

Your email address will not be published.

Back to top button