ಆರ್ಯವರ್ಧನ್ ಗುರೂಜಿ ಬಳಿ ಶಾಸ್ತ್ರ ಕೇಳಬೇಕು ಎಂದರೆ ಕೇವಲ ಇನ್ನೂರು, ಮುನ್ನೂರು ರೂಪಾಯಿ ಹಣ ಇದ್ದರೆ ಸಾಲದು. ಜಸ್ಟ್ ಶಾಸ್ತ್ರ ಕೇಳುವುದಕ್ಕೆ ಐದಾರು ಸಾವಿರ ರೂಪಾಯಿ ಹಣ ಇಟ್ಟುಕೊಂಡು ಹೋಗಬೇಕು ಎಂದು ಶಾಸ್ತ್ರ ಕೇಳಲು ಹೋದ ಜನ ಮಾತಾಡಿಕೊಳ್ಳುತ್ತಿದ್ದರು. ಈ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಮಾತಾಡಿದ ಮಾತುಗಳಿಂದ ಎಲ್ಲವೂ ಸತ್ಯವಾಗಿದೆ ಎನಿಸುತ್ತಿದೆ.
ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಬೇರೆ ಜೀವನದ ಬಗ್ಗೆ ಸಾಕಷ್ಟು ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ದೇಹ ಸೌಂದರ್ಯ, ಆರೋಗ್ಯದ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದರು. ಆದರೆ ಇದೀಗ ಮತ್ತೆ ಅದೇ ರೀತಿ ಉಚ್ಛರಿಸಿದ್ದು, ಇಲ್ಲಿಂದ ಹೋದ ಮೇಲೆ ಹೆಂಡತಿ, ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳುವುದರ ಬಗ್ಗೆಯೂ ಆಲೋಚಿಸಿದ್ದಾರೆ.
ಈ ವಾರದ ಬೆಸ್ಟ್ ಕಂಟೆಸ್ಟೆಂಟ್ ಆಗಿ ಜನರು ಆರ್ಯವರ್ಧನ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ನಾಮಿನೇಷನ್‍ನಿಂದಲೂ ಮೊದಲು ಆರ್ಯವರ್ಧನ್ ಅವರನ್ನೇ ಜನರು ಸೇಫ್ ಮಾಡಿದ್ದಾರೆ. ಈ ವೇಳೆ ಭಾವುಕರಾದ ಆರ್ಯವರ್ಧನ್ ಅವರು ಕಿಚ್ಚ ಸುದೀಪ್ ಅವರಿಗೆ ಬಿಗ್‍ಬಾಸ್ ಮನೆಗೆ ಬಂದಿದ್ದು, ನನಗೆ ಬಹಳ ಖುಷಿಯಾಗಿದೆ. ನಾನು ಮನೆಗೆ ಕೇವಲ ಮಲಗುವುದಕ್ಕೆ ಹೋಗುತ್ತಿದ್ದೆ. ಊಟ ಬೇಕಾದಾಗಲೂ ಹೊಟೇಲ್ ನಲ್ಲಿ ತರಿಸಿಕೊಂಡು ಬಿಡುತ್ತಿದ್ದೆ. ಹಾಗಾಗಿ ದುಡ್ಡೆ ಜಗತ್ತು ಎಂದು ಬರೀ ಬಿಸಿನೆಸ್ ಮೇಲೆಯೇ ಅತಿ ಹೆಚ್ಚು ಗಮನ ಕೊಟ್ಟಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಗೊತ್ತಾಗುತ್ತಿದೆ. ಇದು ನಾಟಕದ ಪ್ರೀತಿಯೋ ಒರಿಜಿನಲ್ ಪ್ರೀತಿಯೋ ಎಂದಿದ್ದಾರೆ.
ಪ್ರೀತಿ ಬಗ್ಗೆ ಮುಂದುವರೆದು ಮಾತನಾಡಿದ ಆರ್ಯವರ್ಧನ್, ನಾಟಕದ ಪ್ರೀತಿ ಹಾಗೂ ಒರ್ಜಿನಲ್ ಪ್ರೀತಿ ಬಗ್ಗೆ ತಿಳಿದ ಮೇಲೆ, ನಾನು ಇಲ್ಲಿಂದ ಹೋದ ಮೇಲೆ ಹೆಂಡತಿ, ಮಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಇದೇ ನಮ್ಮ ಆಸ್ತಿ ಅಂದುಕೊಂಡಿದ್ದೆ. ಮನೆಗೆ ಹೋದರೆ ಹೆಂಡತಿ ನೋಡಿಕೊಳ್ಳಬೇಕು. ಮಗಳಿದ್ದಾಳೆ ಮಗಳಿಗಾಗಿ ದುಡಿಬೇಕು ಎಂದುಕೊಂಡಿದ್ದೆ. ಆ ಮಗಳನ್ನೂ ಪ್ರೀತಿ ಮಾಡಬೇಕು, ಹೆಂಡತಿಯನ್ನು ಪ್ರೀತಿ ಮಾಡಬೇಕು ಎಂದು ಬಂದಿರುವುದೇ ಬಿಗ್‍ಬಾಸ್‍ಗೆ ಬಂದ ಮೇಲೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.