ಇದೀಗ ನವರಾತ್ರಿ ಹಬ್ಬ ನಡೆಯುತ್ತಿದ್ದು, ಅದನ್ನು ಆಚರಿಸಲು ಪ್ರತಿ ದಿನ ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅಲ್ವಾ? ಇಂದು ನಾವು ತೆಂಗಿನಕಾಯಿಯ ಲಡ್ಡು ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಿರಿ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಸಿಹಿ ಕಂಡೆನ್ಸ್ಡ್ ಮಿಲ್ಕ್ – 220 ಗ್ರಾಂ
ತೆಂಗಿನ ತುರಿ – ಅರ್ಧ ಕಪ್
ಒಣ ತೆಂಗಿನ ತುರಿ – ಕೋಟಿಂಗ್‌ಗೆ ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಮನೆಲಿ ಮಾಡಿ ಸೋರೆಕಾಯಿ ಹಲ್ವಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನ ತುರಿಯನ್ನು ಹಾಕಿ 3-4 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
* ಅದಕ್ಕೆ ಸಿಹಿ ಕಂಡೆನ್ಸ್ಡ್ ಮಿಲ್ಕ್ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
* ಮಿಶ್ರಣ ದಪ್ಪವಾಗುತ್ತಾ ಬರುತ್ತಿದ್ದಂತೆ ಕೈಯಾಡಿಸುವುದನ್ನು ಮುಂದುವರಿಸಿ.
* ಈಗ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕಿಡಿ.
* ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ಬಳಿಕ ಒಂದೊಂದು ಟೀಸ್ಪೂನ್‌ನಷ್ಟು ಮಿಶ್ರಣದ ಉಂಡೆಗಳನ್ನು ಕಟ್ಟಿ.
* ಈಗ ಉಂಡೆಗಳನ್ನು ಒಣ ತೆಂಗಿನ ತುರಿಯಲ್ಲಿ ಉರುಳಿಸಿ ಕೋಟ್ ಮಾಡಿ.
* ತೆಂಗಿನಕಾಯಿಯ ಲಡ್ಡು ಇದೀಗ ಸವಿಯಲು ಸಿದ್ದವಾಗಿದ್ದು, ಅದನ್ನು 2-3 ದಿನಗಳ ವರೆಗೆ ಫ್ರಿಜ್‌ನಲ್ಲಿ ಇಡಬಹುದು. ಇದನ್ನೂ ಓದಿ: ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ