ಸಾಮಾನ್ಯವಾಗಿ ಹೆಣ್ಣುಮಕ್ಕಳು ತೆಳ್ಳಗೆ ಬೆಳ್ಳಗೆ ಸುಂದರವಾಗಿ ಕಾಣಲು ಬಯಸುತ್ತಾರೆ. ಅಲ್ಲದೇ ಸುಂದರ ಮೈಕಟ್ಟು ಇರಬೇಕೆಂದು ಆಸೆಪಡುವುದು ಸಹಜ. ಅಂದವಾಗಿ ಕಾಣುವ ಸಲುವಾಗಿ ಯೋಗ, ಜಿಮ್, ವ್ಯಾಯಾಮ ಮಾಡುವುದರ ಜೊತೆಗೆ ಕೆಲವರು ಹಲವಾರು ಬಗೆಯ ಡಯೆಟ್ ಕೂಡಾ ಮಾಡುತ್ತಾರೆ. ಡಯೆಟ್ ಅಲ್ಲಿ ನಾನಾ ಬಗೆಯ ಡಯೆಟ್‌ಗಳಿರುತ್ತವೆ. ಡಯೆಟ್ ಮಾಡುವುದರಿಂದ ದಪ್ಪ ಇರುವವರು ತಮ್ಮ ತೂಕವನ್ನು ಇಳಿಸಿಕೊಂಡು ಸುಂದರವಾಗಿ ಕಾಣಬಹುದು. ಇಂತಹ ಡಯೆಟ್‌ಗಳಲ್ಲಿ ಕೀಟೋ ಡಯೆಟ್ (Keto Diet) ಕೂಡ ಒಂದು. ಏನಿದು ಕೀಟೋ ಡಯೆಟ್? ಇದು ಯಾವ ರೀತಿಯ ಆಹಾರವನ್ನು ಒಳಗೊಂಡಿರುತ್ತದೆ? ಈ ಡಯೆಟ್ ಮಾಡುವುದರಿಂದ ಆಗುವ ಲಾಭಗಳೇನು? ಹಾಗೆಯೇ ಇದರ ದುಷ್ಪರಿಣಾಮಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು..?- ಚಿಕಿತ್ಸೆ ಹೇಗೆ..?
Advertisement
ಏನಿದು ಕೀಟೋ ಡಯೆಟ್?
ಕೆಟೋಜೆನಿಕ್ ಆಹಾರವು ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವುದಲ್ಲದೇ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ಇದರಿಂದ ನಮ್ಮ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ ಮತ್ತು ಕೆಲವು ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂದು ವರದಿಗಳು ತಿಳಿಸುತ್ತವೆ.
Advertisement
ಕೆಟೋಜೆನಿಕ್ ಆಹಾರಗಳು ಮಧುಮೇಹ, ಕ್ಯಾನ್ಸರ್, ಅಪಸ್ಮಾರ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಇದನ್ನು ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಶತಮಾನಗಳಿಂದ ಬಳಸಲಾಗುತ್ತಿತ್ತು. 19ನೇ ಶತಮಾನದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಈ ವಿಧಾನವನ್ನು ಸಾಮಾನ್ಯವಾಗಿ ಬಳಸಲಾಗುತ್ತಿತ್ತು. 1920ರಲ್ಲಿ ಮಕ್ಕಳಲ್ಲಿ ಉಂಟಾಗುವ ಅಪಸ್ಮಾರಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿ ಇದನ್ನು ಪರಿಚಯಿಸಲಾಯಿತು. ಇದು ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಹೊಂದಿದ್ದು, ಅಧಿಕ ಪ್ರೋಟೀನ್ ಆಹಾರವನ್ನು ಹೊಂದಿದೆ.
Advertisement
Advertisement
ಕೀಟೋ ಡಯೆಟ್‌ನಲ್ಲಿ ನಾನಾಬಗೆಯ ಡಯೆಟ್‌ಗಳಿವೆ. ಉದಾಹರಣೆಗೆ ಸ್ಟ್ಯಾಂಡರ್ಡ್ ಕೆಟೋಜೆನಿಕ್ ಡಯೆಟ್ ಹಾಗೂ ಸೈಕ್ಲಿಕ್ ಕೆಟೋಜೆನಿಕ್ ಡಯೆಟ್‌ಗಳು ಕೀಟೋ ಡಯೆಟ್‌ನ ಅಡಿಯಲ್ಲಿ ಬರುತ್ತವೆ. ಕೀಟೋ ಆಹಾರದ ಪ್ರಯೋಜನಗಳನ್ನು ಕೆಳಗೆ ತಿಳಿಸಲಾಗಿದೆ.
* ತೂಕ ಇಳಿಸುವಲ್ಲಿ ಸಹಕಾರಿ:
ಕೆಟೋಜೆನಿಕ್ ಆಹಾರವು ತೂಕ ಇಳಿಸುವಲ್ಲಿ ಸಹಾಯ ಮಾಡುವುದಲ್ಲದೇ ಚಯಾಪಚಾಯವನ್ನು ಹೆಚ್ಚಿಸುತ್ತದೆ. ಇದು ಹಸಿವನ್ನು ಉತ್ತೇಜಿಸುವ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಹಸಿವು ಕಡಿಮೆಯಾಗುವುದಲ್ಲದೇ ತೂಕ ಇಳಿಸಿಕೊಳ್ಳಬಹುದು.
* ಮೊಡವೆಗಳನ್ನು ಸುಧಾರಿಸುತ್ತದೆ:
ಹಲವರಲ್ಲಿ ಮೊಡವೆಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅವರು ಸೇವಿಸುವ ಆಹಾರದಿಂದ ಅಥವಾ ಧೂಳು ಮತ್ತು ಮಾಲಿನ್ಯದಿಂದಾಗಿ ಉಂಟಾಗಬಹುದು. ಅದಕ್ಕಾಗಿ ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು.
* ಕ್ಯಾನ್ಸರ್ ತಡೆಗಟ್ಟುವಿಕೆ:
ಕೆಲವು ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಸಹಾಯ ಮಾಡುವಲ್ಲಿ ಕೆಟೋಜೆನಿಕ್ ಆಹಾರ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಪರಿಶೀಲಿಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯ ಜೊತೆಗೆ ಕೆಟೋಜೆನಿಕ್ ಆಹಾರವು ಸುರಕ್ಷಿತ ಮತ್ತು ಸೂಕ್ತವಾದ ಪೂರಕ ಚಿಕಿತ್ಸೆಯಾಗಿದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಇದು ಸಾಮಾನ್ಯ ಕೋಶಗಳಿಂತ ಕ್ಯಾನ್ಸರ್ ಕೋಶಗಳಲ್ಲಿ ಹೆಚ್ಚು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಿ ಅವು ಸಾಯುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.
* ಹೃದಯದ ಆರೋಗ್ಯವನ್ನು ಕಾಪಡಿಕೊಳ್ಳಬಹುದು:
ನಾವು ತಿನ್ನುವ ಆಹಾರಗಳು ನಮ್ಮ ಹೃದಯದ ಮೇಲೆ ಬೇಗ ಪರಿಣಾಮ ಬೀರುತ್ತದೆ. ಹೆಚ್ಚಿನ ಕೊಬ್ಬಿನಾಂಶ ತುಂಬಿರುವ ಆಹಾರಗಳನ್ನು ತಿನ್ನುವುದರಿಂದ ಹೃದಯ ರಕ್ತನಾಳದ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಕೊಬ್ಬು ತುಂಬಿದ ದೇಹದ ಮೇಲೆ ಕೀಟೋ ಡಯೆಟ್ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರಮಾಡಬಹುದು. ಕೀಟೋ ಆಹಾರವನ್ನು ಅನುಸರಿಸುವಾಗ ಆರೋಗ್ಯಕರ, ಪೌಷ್ಟಿಕಾಂಶದ ಸಮತೋಲಿತ ಆಹಾರವನ್ನು ಸೇವಿಸುವುದು ಅತಿ ಮುಖ್ಯವಾಗಿದೆ.
*ಪಿಸಿಒಎಸ್ ರೋಗಲಕ್ಷಣಗಳನ್ನು ಸುಧಾರಿಸತ್ತದೆ:
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಒಂದು ಹಾರ್ಮೋನ್ ಅಸ್ವಸ್ಥತೆಯಾಗಿದ್ದು, ಇದು ಪುರುಷ ಹಾರ್ಮೋನುಗಳು, ಅಂಡೋತ್ಪತ್ತಿ ಅಪಸಾಮಾನ್ಯ ಕ್ರಿಯೆ ಮತ್ತು ಪಾಲಿಸಿಸ್ಟಿಕ್ ಅಂಡಾಂಶಯಗಳಿಗೆ ಕಾರಣವಾಗಬಹುದು. ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರವು ಪಿಸಿಒಎಸ್ ಹೊಂದಿರುವ ಜನರಲ್ಲಿ ಚರ್ಮದ ಸಮಸ್ಯೆಗಳು ಮತ್ತು ತೂಕ ಹೆಚ್ಚಾಗುವಂತಹ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.
ಕೆಟೋಜೆನಿಕ್ ಆಹಾರಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದು ಕೆಲವೊಂದು ದುಷ್ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ ಕೆಲವು ಜನರು ಈ ರೀತಿಯಾದ ಡಯೆಟ್ ಅನ್ನು ತಪ್ಪಿಸುವುದು ಒಳ್ಳೆಯದು.ಯಾರು ಈ ಡಯೆಟ್‌ನಿಂದ ದೂರ ಉಳಿದರೆ ಒಳಿತು ಎಂಬುದನ್ನು ಕೆಳಗೆ ತಿಳಿಸಲಾಗಿದೆ.
1) ಮಧುಮೇಹ ಹೊಂದಿದ್ದು, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿರುವವವರು.
2) ಮೂತ್ರಪಿಂಡ ಕಾಯಿಲೆ ಅಥವಾ ಪ್ಯಾಂಕ್ರಿಯಾಟೈಟಿಸ್ ಇರುವವರು.
3) ಗರ್ಭಾವಸ್ಥೆಯಲ್ಲಿ ಇರುವವರು ಮತ್ತು ಮಗುವಿಗೆ ಹಾಲುಣಿಸುವವರು.
ಕೀಟೋ ಡಯೆಟ್‌ನಲ್ಲಿ ನೀವು ಸೇವಿಸಬಹುದಾದ ಆಹಾರಗಳು:
* ಮೀನು ಮತ್ತು ಸೀಫುಡ್
* ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ತರಕಾರಿಗಳು.
*ಚೀಸ್
*ಅವಕಾಡೋ
*ಮೊಟ್ಟೆ
*ನಟ್ಸ್ ಮತ್ತು ಆರೋಗ್ಯಕರ ಎಣ್ಣೆ
*ಮೊಸರು
*ಸಕ್ಕರೆ ಹಾಕದ ಕಾಫಿ ಮತ್ತು ಟೀ
*ಡಾರ್ಕ್ ಚಾಕೊಲೇಟ್ ಇತ್ಯಾದಿ..
ಕೀಟೋ ಡಯೆಟ್ ಮಾಡುವ ಮೊದಲು ನೀವು ವೈದ್ಯರ ಸಲಹೆಯನ್ನು ಕೇಳಿ ಆಮೇಲೆ ಆಹಾರಕ್ರಮವನ್ನು ಅನುಸರಿಸಿದರೆ ಒಳ್ಳೆಯದು. ಆದ್ದರಿಂದ ಪ್ರತಿಯೊಬ್ಬರು ಈ ಡಯೆಟ್ ಅನ್ನು ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆದು ನಂತರ ನಿಮ್ಮ ದೇಹಕ್ಕೆ ಇದು ಸರಿಯಾಗಿ ಹೊಂದುವುದಾದರೆ ಮಾತ್ರ ಈ ಡಯೆಟ್ ಅನ್ನು ಕೈಗೊಳ್ಳಿ. ಇದನ್ನೂ ಓದಿ: ಕ್ಯಾನ್ಸರ್ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?
Web Stories