ಮಂಡ್ಯ: ಯಾವುದೇ ಜಾತಿಯ ಬಗ್ಗೆ ಹೀನಾಯವಾಗಿ ಮಾತಾಡಬಾರದು ಎಂದು ಶಾಸಕ ಡಿ.ಸಿ ತಮ್ಮಣ್ಣ (DC Tammanna) ಹೇಳಿದರು.
ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಯವರ ಹೇಳಿಕೆಗೆ ತಿರುಗೇಟು ಕೊಟ್ಟರು. ದೇಶಕ್ಕೆ ಬ್ರಾಹ್ಮಣರು ಸಂಸ್ಕಾರ ಕೊಟ್ಟಿದ್ದಾರೆ. ಉತ್ತಮ ಗುಣಗಳನ್ನು ರೂಢಿಸಿಕೊಂಡು ಬ್ರಾಹ್ಮಣತ್ವ ಪಡೆದವರು. ಯಾವ ಜಾತಿಗೆ ಸೇರಿದ್ದರೂ ಆತ ಬ್ರಾಹ್ಮಣ ಎಂದು ಅವರು ಅಭಿಪ್ರಾಯಪಟ್ಟರು.
Advertisement
Advertisement
ಬ್ರಾಹ್ಮಣತ್ವ ಬೇರೆ ಬ್ರಾಹ್ಮಣ ಜಾತಿಯೇ ಬೇರೆ ಎಂದ ಅವರು ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ ಹೀನಾಯವಾಗಿ ಮಾತಾಡಬಾರದು ಎಂದರು. ಇದನ್ನೂ ಓದಿ: ಬ್ರಾಹ್ಮಣರ ವಿರುದ್ಧದ ಎಚ್‍ಡಿಕೆ ಹೇಳಿಕೆಗೆ ಪೇಜಾವರ ಶ್ರೀ ಬೇಸರ
Advertisement
Advertisement
2023ರ ಮಹಾಸಮರದ ಹೊಸ್ತಿಲಲ್ಲಿ ದಳಪತಿ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಯನ್ನು ಹೆಚ್‍ಡಿಕೆ ಟಾರ್ಗೆಟ್ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತದೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲಾನ್ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೆಚ್‍ಡಿಕೆ ಹೇಳಿದ್ದು ಯಾಕೆ..?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಎಚ್.ಡಿಕುಮಾರಸ್ವಾಮಿ ಇದೀಗ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರೆಸ್‍ಎಸ್ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ ಎಂಬುದಾಗಿ ಹೇಳಿದ್ದಾರೆ. ಇದನ್ನೂ ಓದಿ: `ಬ್ರಾಹ್ಮಣ ಸಿಎಂ’ ಬಾಂಬ್ – ಡ್ಯಾಮೇಜ್ ತಪ್ಪಿಸಲು 50 ಸಾವಿರ ವಾಟ್ಸಪ್ ಗ್ರೂಪ್ ಮೊರೆಹೋದ BJP
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k