ಚೆನ್ನೈ: ತಮಿಳುನಾಡು (Tamil Nadu) ಮೂಲದ ಆಟೋ ಸಂಸ್ಥೆಯೊಂದರ (Auto Firm) ಉನ್ನತ ಅಧಿಕಾರಿಯೊಬ್ಬರಿಗೆ ಬೆದರಿಕೆಯೊಡ್ಡಿದ ಆರೋಪದಡಿ ದ್ರಾವಿಡ ಮುನ್ನೇತ್ರ ಕಳಗಂ (Dravida Munnetra Kazhagam) ಶಾಸಕ ಎಸ್.ಆರ್. ರಾಜಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗಷ್ಟೇ ತಮಿಳುನಾಡು ಮೂಲದ ವಾಹನ ಸಂಸ್ಥೆಯೊಂದರ ಸಿಇಒಗೆ, ಎಸ್.ಆರ್. ರಾಜಾ (MLA SR Raja) ಬೆದರಿಕೆಯೊಡ್ಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಡೇಜಂಗ್ ಮೊಪಾರ್ಟ್ರ್ಸ್ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಕೃಷ್ಣಮೂರ್ತಿ (CEO Krishnamoorthy) ಅವರು ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಶಶಿ ತರೂರ್‌ಗೆ ಕೇರಳದಲ್ಲೇ ಸಿಕ್ತಿಲ್ಲ ಬೆಂಬಲ – ರಾಹುಲ್ ಸ್ಪರ್ಧಿಸುವಂತೆ ಒತ್ತಾಯ
Advertisement
In the Dravidian Model Aatchi of @arivalayam , I wonder which is a bigger threat to people – L&O breakdown during DMK rule or L&O breakdown DUE to the DMK rule?
(Seen in the video: DMK MLA SR Raja threatening and verbally abusing employees of a factory in Maraimalai Nagar) pic.twitter.com/8tZZg4s3Tr
— K.Annamalai (@annamalai_k) September 21, 2022
Advertisement
ಡೇಜಂಗ್ ಮೊಪಾರ್ಟ್ರ್ಸ್ ಪ್ರೈವೇಟ್ ಲಿಮಿಟೆಡ್ (Daejung Moparts Pvt Ltd) ಆಡಳಿತ ಮಂಡಳಿಯಿಂದ ವಂಚನೆಯಾಗಿರುವುದಾಗಿ ದೂರು ನೀಡಿದ ಹಿನ್ನೆಲೆ ಆರ್.ಕೆ. ಶರ್ಮಾ (RK Sharma) ಅವರ ಪರವಾಗಿ ಕೃಷ್ಣಮೂರ್ತಿ ಅವರು ಎಸ್‍ಆರ್ ರಾಜಾ ಕಂಪನಿಯ ಆವರಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಎಸ್‍ಆರ್ ರಾಜಾ ಕಂಪನಿಯ ಅಧಿಕಾರಿಗಳಿಗೆ ಗದರಿಸಿ, ಬೆದರಿಕೆ ಹಾಕುತ್ತಿರುವುದನ್ನು ವೈರಲ್ ಆದ ವೀಡಿಯೋದಲ್ಲಿ ಕಾಣಬಹುದಾಗಿದೆ.
Advertisement
Advertisement
ಇದೀಗ ಎಸ್.ಆರ್. ರಾಜಾ ಅವರ ವಿರುದ್ಧತಾಂಬರಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 294 (ಅಶ್ಲೀಲ ಪದಗಳ ಬಳಕೆ), 447 (ಅತಿಕ್ರಮಣ ಪ್ರವೇಶ), ಮತ್ತು 506 (ಐ) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ