ಬೆಂಗಳೂರು: ಆಂತರಿಕ ಕಚ್ಚಾಟದಲ್ಲಿ ಹೈರಾಣಾಗಿರುವ ಕಾಂಗ್ರೆಸ್‍ನಲ್ಲೀಗ ಬೆಳಗಾವಿ ನಾಯಕರ ಗುದ್ದಾಟ ಹೊಸದೊಂದು ಸ್ಫೋಟಕ ಬೆಳವಣಿಗೆಗೆ ಕಾರಣವಾಗಿದೆ. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ನಿಂತಿರುವ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಾರಕಿಹೊಳಿ ಬ್ರದರ್ಸ್ ತಿರುಗಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಕೆ ಶಿವಕುಮಾರ್ ಅವರ ಹಸ್ತಕ್ಷೇಪ ಅತಿಯಾಯ್ತು. ಹೀಗೆ ಹಸ್ತಕ್ಷೇಪ ಮುಂದುವರೆದ್ರೆ ನಾವು 13 ಮಂದಿ ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗ ಬೇಕಾಗುತ್ತೆ ಅಂತ ಎಚ್ಚರಿಸಿದ್ದಾರಂತೆ. ಈ ಭಿನ್ನಮತ ಶಮನದ ಹೊಣೆಯನ್ನು ಸಿದ್ದರಾಮಯ್ಯಗೆ ಹೈಕಮಾಂಡ್ ನೀಡಿದ್ದು, ಇವತ್ತು ರಮೇಶ್ ಜಾರಕಿಹೊಳಿ ಮಾಜಿ ಸಿಎಂರನ್ನು ಭೇಟಿ ಆಗಿದ್ದಾರೆ.
Advertisement
Advertisement
ಬಿಜೆಪಿ ಪ್ರಾಬಲ್ಯದ ನಡುವೆ ದೊಡ್ಡ ಜಿಲ್ಲೆಯಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿದ್ದು ನಾವು. ನಮಗೆ ಗೌರವ ಇಲ್ಲ ಅಂದ್ರೆ ಹೇಗೆ..? ಏನೇ ಇದ್ದರೂ ನಮ್ಮ ಬಳಿ ಚರ್ಚಿಸಬಹುದು. ಅದು ಬಿಟ್ಟು ನಮ್ಮ ಮೇಲೆ ಸವಾರಿ ಮಾಡಿದ್ರೆ ಹೇಗೆ..? ನಮ್ಮ ಮೇಲೆಯೇ ಸವಾರಿ ಮಾಡಿದ್ರೆ ಕೈ ಕಟ್ಟಿ ಕೂರೋಕೆ ಆಗಲ್ಲ. ನನ್ನ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ಪದೇ ಪದೇ ಜಿದ್ದಿಗೆ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಮನವೊಲಿಸೋದು ಕಷ್ಟ ಅಂತ ಸಿದ್ದರಾಮಯ್ಯಗೆ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ವಿಧಾನಸಭೆ ಬಲಾಬಲ: 222 (224)
ಅಗತ್ಯ ಸಂಖ್ಯಾಬಲ: 112
ಬಿಜೆಪಿ- 104
ಕಾಂಗ್ರೆಸ್- 81
ಜೆಡಿಎಸ್- 37
Advertisement
ಕಾಂಗ್ರೆಸ್ ಹೈ ಕಮಾಂಡ್‍ಗೂ ಬೆಳಗಾವಿ ರಾಜಕೀಯ ಕಲಹ ತಲೆನೋವಾಗಿದೆ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಭುಗಿಲೆದ್ದಿದೆ. ಶನಿವಾರ ತಡರಾತ್ರಿವರೆಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಎರಡು ಬಣದವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ತಮಗಾಗುತ್ತಿರುವ ಕಿರಿಕಿರಿ ಬಗ್ಗೆ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಪರಸ್ಪರ ದೂರು ನೀಡಿದ್ದಾರೆ.
ಹೀಗೆ ರಾಜ್ಯ ನಾಯಕರಲ್ಲದೆ ಎಐಸಿಸಿ ಮಟ್ಟದಲ್ಲಿಯೂ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಕೊನೆಗೆ ಎರಡು ಬಣಕ್ಕೂ ಸದ್ಯಕ್ಕೆ ಸುಮ್ಮನಿರಿ, ಯಾರು ಬಹಿರಂಗವಾಗಿ ಮಾತನಾಡಬೇಡಿ ಅಂತ ಸೂಚನೆ ನೀಡಿ ವೇಣುಗೋಪಾಲ್ ಸುಮ್ಮನಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Uc0gpGfnrBE