ಬೆಂಗಳೂರು: ನಮ್ಮದು ಯಾರಿಗೂ ಕೆಟ್ಟದ್ದನ್ನು ಬಯಸುವ ವಂಶವಲ್ಲ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ (D.K Suresh) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಹೆಸರು ತೆಗದವರು ಸರ್ವನಾಶ ಆಗುತ್ತಾರೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿಯವರ (H.D Kumaraswamy) ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ವೇಳೆ, ಕುಮಾರಸ್ವಾಮಿ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲಿ. ಅವರು ಏನೇ ಕೆಟ್ಟದ್ದು ಬಯಸಿದರೂ ನಾವು ಕೆಟ್ಟದ್ದನ್ನು ಬಯಸಲ್ಲ. ಬೇರೆಯವರು ಸರ್ವನಾಶ ಆಗಲಿ ಎಂದು ಬಯಸುವ ವಂಶ ನಮ್ಮದಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಭರ್ತಿ: ಮೂರನೇ ಬಾರಿ ಬಾಗಿನ ಅರ್ಪಿಸಿದ ಸಿಎಂ
ಕಾಂಗ್ರೆಸ್‌ನವರು ಬೀದಿಯಲ್ಲಿ ತಮಟೆ ಹೊಡೆಯೋದನ್ನ ನಿಲ್ಲಿಸಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದಿನ ಬೆಳಗಾದರೆ ತಮಟೆ ಹೊಡೆದುಕೊಂಡು ನಿಂತಿರೋರು ಯಾರು? ಇನ್ನೊಬ್ಬರ ಮೇಲೆ ಪ್ರತಿದಿನ ಆರೋಪ ಮಾಡುತ್ತಿರುವುದು. ಅದಕ್ಕೆ ಅವರಿಗೆ ಒತ್ತಡದಿಂದ ಆರೋಗ್ಯ ಏರುಪೇರಾಗಿದೆ. ಅವರ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲಿ. ಒತ್ತಡದ ಮಧ್ಯೆ ಆರೋಪ ಮಾಡೋದು ಬೇಡ. ಅವರ ಸೇವೆ ದೇಶಕ್ಕೆ ರಾಜ್ಯಕ್ಕೆ ಬೇಕು, ಆರೋಗ್ಯದ ಕಡೆ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ಅನ್ಯಾಯ, ದೇಶ ವಿಭಜನೆ ಕೂಗು ಮತ್ತೊಮ್ಮೆ ಏಳಬಹುದು: ಡಿಕೆ ಸುರೇಶ್