-ಸಿಬಿಐ ಕೇಸ್ ವಾಪಸ್ ಪಡೆದ ಸರ್ಕಾರದ ಕ್ರಮಕ್ಕೆ ಸಂಸದರ ಸಮರ್ಥನೆ
ಬೆಂಗಳೂರು: ಡಿಕೆಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ ಸರ್ಕಾರ ರಾಜಕೀಯವಾಗಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿಯೇ ಉತ್ತರ ಕೊಟ್ಟಿದೆ ಅಂತ ಸಂಸದ ಡಿಕೆ ಸುರೇಶ್ (DK Suresh) ಸಹೋದರನ ಸಿಬಿಐ ಕೇಸ್ (CBI Case) ವಾಪಸ್ ತೆಗೆದುಕೊಂಡ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
Advertisement
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಇಡೀ ದೇಶದ ಸಂವಿಧಾನವನ್ನ ಬಿಗಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಕಳೆದ 9 ವರ್ಷದಿಂದ ಸಂವಿಧಾನ ವಿರೋಧಿ ಕೆಲಸ ಮಾಡ್ತಿದ್ದಾರೆ. ಸಾಂವಿಧಾನ ಹುದ್ದೆಯನ್ನ ದುರ್ಬಳಕೆ ಮಾಡ್ತಿದ್ದಾರೆ. ಕೇಸ್ ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ (Government Of Karnataka) ನಿರ್ಣಯ. ಇಡೀ ಕ್ಯಾಬಿನೆಟ್ ತೀರ್ಮಾನ. ಹಿಂದೆ ಡಿಕೆ ಶಿವಕುಮಾರ್ ಅವರನ್ನ ಸಿಲುಕಿಸಬೇಕು ಅಂತ ಅವರ ಹೈಕಮಾಂಡ್ ಮಾತು ಕೇಳಿ ಕೇಸ್ ಸಿಬಿಐಗೆ ಕೊಟ್ರು. ಡಿಕೆಶಿವಕುಮಾರ್ ಅವರನ್ನ ರಾಜಕೀಯ ದಾಳ ಮಾಡಿಕೊಳ್ಳಲು ಬಿಜೆಪಿ ಅವರು ಆತುರವಾಗಿ ತೀರ್ಮಾನ ಮಾಡಿದ್ದರು. ಬಿಜೆಪಿ ಮಾಡಿದ ಆತುರದ ತೀರ್ಮಾನವನ್ನು ಕ್ಯಾಬಿನೆಟ್ ಹಿಂಪಡೆದಿದೆ ಅಂತ ಸಮರ್ಥನೆ ಮಾಡಿಕೊಂಡರು.
Advertisement
Advertisement
ಮೊದಲೇ ಇಡಿ, ಐಟಿ (ED – IT) ಈ ಕೇಸ್ ನಡೆಸುತ್ತಿತ್ತು. ಹೀಗಿದ್ದರೂ ಈ ಕೇಸ್ ಅನ್ನ ಸಿಬಿಐಗೆ ಕೊಟ್ರು. ಸಿಬಿಐಯನ್ನ ಬಳಸಿಕೊಂಡು ಡಿಕೆ ಶಿವಕುಮಾರ್ ಅವರಿಗೆ ತೊಂದರೆ ಕೊಡೋಕೆ, ರಾಜಕೀಯ ಕಾರಣಕ್ಕೆ ಮಾಡಿದ ಪ್ರಕರಣ ಇದು. ಯಾವುದೇ ಕೇಸ್ ಸಿಬಿಐಗೆ ಕೊಡಬೇಕಾದರೇ ಸರ್ಕಾರ, ಕಾನುನೂ ಇಲಾಖೆ ಒಪ್ಪಿಗೆ ಬೇಕು. ಆದರೆ ಕಾನೂನು ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಲೋಕಾಯುಕ್ತದ ಮೂಲಕವೇ ಮಾಡಬಹುದಿತ್ತು. ಆದರೆ ಡಿಕೆಶಿವಕುಮಾರ್ ಅವರಿಗೆ ತೊಂದರೆ ಕೊಡಬೇಕು ಅಂತ ಕಾನೂನು ಮೀರಿ ಸಿಬಿಐಗೆ ಕೇಸ್ ಕೊಟ್ಟರು. ರಾಜಕೀಯವಾಗಿ ಮಾಡಿದ ಪ್ರಕರಣಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಸರ್ಕಾರ ಉತ್ತರ ಕೊಟ್ಟಿದೆ ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ಮಹೂರ್ತ : ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ
Advertisement
ಸಾಂವಿಧಾನಿಕ ವಿಚಾರ ತಿರುಚುವ ಕೆಲಸ ಮಾಡಿರುವುದು ಬಿಜೆಪಿ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ವಿಷಯ ಗೊತ್ತು. ಯಾರಿಗೆ ಎಷ್ಟು ಕಿರುಕುಳ ನೀಡ್ತಿದ್ದಾರೆ? ವಿಪಕ್ಷಗಳಿಗೆ ಹೇಗೆ ಕಿರುಕುಳ ಕೊಟ್ಟಿದ್ದಾರೆ? ಎಲ್ಲಾ ಗೊತ್ತಿದೆ. ಬಿಜೆಪಿ ಮಾಡಿದ ರಾಜಕೀಯ ಪ್ರಕರಣಕ್ಕೆ ರಾಜಕೀಯವಾಗಿಯೇ ಉತ್ತರ ನೀಡಲಾಗಿದೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಚಿವ ಶರಣಬಸಪ್ಪ ದರ್ಶನಾಪೂರ ಕ್ಷೇತ್ರದಲ್ಲೇ 6,000 ಕ್ವಿಂಟಲ್ ಪಡಿತರ ಅಕ್ಕಿಗೆ ಕನ್ನ!