ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸಂಸದ ಡಿಕೆ ಸುರೇಶ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಒಂದು ವಾರದ ಬಳಿಕ ಅಂದ್ರೆ ಆಗಸ್ಟ್ 5ರಂದು ಈ ಬೆದರಿಕೆ ಕರೆ ಬಂದಿದೆ.
Advertisement
ಲ್ಯಾಂಡ್ ಲೈನ್ ಗೆ ಕರೆ ಮಾಡಿದ ವ್ಯಕ್ತಿ ಇಂಗ್ಲೀಷ್ ಹಾಗೂ ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದು, ಡಿಕೆ ಸುರೇಶ್ ಜೊತೆ ಮಾತನಾಡ್ಬೇಕು ಅಂತ ಹೇಳಿದ್ದ. ಫೋನ್ ರಿಸೀವ್ ಮಾಡಿದ್ದ ವ್ಯಕ್ತಿ ಡಿ.ಕೆ ಸುರೇಶ್ ಡ್ರೈವರ್ ದೇವ್ ಮೊಬೈಲ್ ನಂಬರ್ ಕೊಟ್ಟಿದ್ರು. ಬಳಿಕ ದೇವ್ ಮೊಬೈಲ್ ನಂಬರ್‍ಗೆ ಫೋನ್ ಮಾಡಿದ ರವಿ ಪೂಜಾರಿ, ಸುರೇಶ್ ಜೊತೆ ಮಾತನಾಡ್ಬೇಕು ಅಂತ ಹೇಳಿದ್ದ.
Advertisement
ಡಿಕೆ ಸುರೇಶ್ ಮಾತ್ರ ಫೋನ್ ತೆಗೆದುಕೊಂಡು ಭೂಗತ ಪಾತಕಿ ಜೊತೆ ಮಾತನಾಡಿರಲಿಲ್ಲ. ನಿಮ್ಮ ಬಾಸ್ ಬಳಿ ಬೇಕಾದಷ್ಟು ಬೇನಾಮಿ ಆಸ್ತಿ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ಐಟಿ ದಾಳಿ ಮುಗಿದ ಮೇಲೆ ನನಗೆ ಹಣ ಕೊಡೋದಿಕ್ಕೆ ಹೇಳು. ಇಲ್ಲ ಅಂದ್ರೆ ಪರಿಣಾಮ ನೆಟ್ಟಗೆ ಇರಲ್ಲ ಎಂದಿದ್ದಾನೆ.
Advertisement
ರವಿ ಪೂಜಾರಿ ಫೋನ್ ಮಾಡ್ತಿದ್ದಂತೆ ಡಿಕೆಶಿ ಮನೆಯಿಂದ ಹೊರಹೋಗಿದ್ದ ಸುರೇಶ್, ಮನೆಗೆ ಮತ್ತೆ ಓಡಿ ಬಂದು ದೇವ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ರವಿ ಪೂಜಾರಿ ಹೆಸರಿನಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಅಂತ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನಲ್ಲಿ 14 ಡಿಜಿಟ್ ನಂಬರ್ ನಿಂದ ಕರೆ ಬಂದಿತ್ತು. ಮತ್ತೆ unknown ಹೆಸರಲ್ಲಿ ಕರೆಬಂದಿತ್ತು ಎಂದು ಉಲ್ಲೇಖಿಸಲಾಗಿದೆ.