ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು, ಬೀದಿಯಲ್ಲಿ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಬಿಜೆಪಿ

Public TV
2 Min Read
bjp cng

– ವಿದೇಶಾಂಗ ನೀತಿ ಎಂದರೆ ಕದ್ದು ಗ್ರಾನೈಟ್ ವ್ಯಾಪಾರ ಮಾಡುವಂಥದಲ್ಲ

ಬೆಂಗಳೂರು: ಉಕ್ರೇನ್ ವಿಚಾರದಲ್ಲಿ ಭಾರತದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಸಂಸದ ಡಿ.ಕೆ ಸುರೇಶ್ ಅವರು ಹೇಳಿದ್ದರು. ಮೋದಿ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವ ಡಿ.ಕೆ ಸುರೇಶ್ ಅವರ ಹೇಳಿಕೆ ಕುರಿತಾಗಿ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲವಾಗಿ ಆಕ್ರೋಶ ಹೊರಹಾಕಿದೆ.

ಟ್ವೀಟ್‍ನಲ್ಲಿ ಏನಿದೆ?: ರಾಜ್ಯದ ಕಾಂಗ್ರೆಸ್ಸಿನ ಏಕೈಕ ಸಂಸದ ಡಿ.ಕೆ. ಸುರೇಶ್ ಅವರೇ, ವಿದೇಶಾಂಗ ನೀತಿ ಎಂದರೆ ಹಾದಿಬೀದಿಯಲ್ಲಿ ನಿಂತು ಮಾತನಾಡುವ ವಿಚಾರವಲ್ಲ. ಅದು ಕಪ್ಪು ಹಣ ಸಂಗ್ರಹಿಸಿ ತಿಹಾರ್ ಜೈಲು ಸೇರಿದ ನಿಮ್ಮ ಸಹೋದರನಿಗೆ ಜಾಮೀನು ಪಡೆದಂತಲ್ಲ. ರಾಜತಾಂತ್ರಿಕ ವಿಚಾರವನ್ನು ಹೇಗೆ ನಿಭಾಯಿಸಬೇಕೆಂದು ಮೋದಿ ಸರ್ಕಾರ ನಿಮ್ಮಿಂದ ಕಲಿಯಬೇಕಾದ್ದೇನಿಲ್ಲ ಎಂದು ಕಿಡಿ ಕಾರಿದೆ.

ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು, ಈಗ ಹಾದಿಬೀದಿಯಲ್ಲಿ ನಿಂತು ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ವಿದೇಶಾಂಗ ನೀತಿ ಎಂದರೆ ಕದ್ದು ಗ್ರಾನೈಟ್ ವ್ಯಾಪಾರ ಮಾಡುವಂಥದಲ್ಲ, ಕಂಡವರ ಭೂಮಿಗೆ ಬೇಲಿ ಸುತ್ತುವುದಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

ಪುಡಿ ರೌಡಿಗಳ ಗುಂಪು ಕಟ್ಟಿಕೊಂಡು ಸರ್ಕಾರಿ ಕಾರ್ಯಕ್ರಮದಲ್ಲಿ ದಾಂಧಲೆ ಸೃಷ್ಟಿಸುವುದೂ ಅಲ್ಲ. ಮೋದಿ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವ ಡಿ.ಕೆ ಶುರೇಶ್ ಅವರೇ, ನಿಮ್ಮ ಐವತ್ತು ವರ್ಷದ ರಾಷ್ಟ್ರೀಯ ಯುವ ನಾಯಕ ಚೀನಾ ದೇಶದ ಜೊತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿ ಬಂದರಲ್ಲ, ಅದು ಯಾವ ವಿದೇಶಾಂಗ ನೀತಿ? ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ನೆರೆ ರಾಷ್ಟ್ರದ ಜೊತೆಗೆ ಗುಪ್ತ ಒಡನಾಟ ಇಟ್ಟುಕೊಳ್ಳುವ ಬಗ್ಗೆ ನಿಮ್ಮ ನಿಲುವೇನು? ಎಂದು ಕಾಂಗ್ರೆಸ್‍ಗೆ ಪ್ರಶ್ನೆ ಮಾಡಿದ್ದಾರೆ.

ರಾಹುಲ್ ಗಾಂಧಿಯವರು ಚೀನಾ ಜೊತೆ ಒಪ್ಪಂದವೊಂದಕ್ಕ ಮಾಡಿದ ಸಹಿ ಯಾವ ವಿಚಾರಕ್ಕೆ? ಕನಕಪುರದ ಬಂಡೆ ಮಕ್ಕಳು ಕದ್ದು ಸಂಗ್ರಹಿಸಿರುವ ಗ್ರಾನೈಟ್ ಕಲ್ಲಿನ ರಫ್ತಿಗೆ ಚೀನಾ ಜೊತೆ ಮಾಡಿಕೊಂಡ ಒಡಂಬಡಿಕೆ ಅದಾಗಿರಬಹುದೇ? ಎಂದು ಟ್ವೀಟ್ ಮಾಡುವ ಮೂಲಕವಾಗಿ ಕಾಂಗ್ರೆಸ್‍ಗೆ ಬಿಸಿ ಮುಟ್ಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *