ಬೆಂಗಳೂರು: ಸಿದ್ದರಾಮೋತ್ಸವ ಮುಗಿದಿದ್ದು, ಕಾಂಗ್ರೆಸ್‌ನಲ್ಲಿ ಇನ್ನೇನಿದ್ದರೂ ಒಗ್ಗಟ್ಟಿನ ಮಂತ್ರ ಪಠಿಸಬೇಕಿದೆ. ನಿನ್ನೆಯಷ್ಟೇ ಡಿಕೆಶಿ, ಸಿದ್ದರಾಮಯ್ಯರ ನಡುವೆ ಗುದ್ದಾಟ ಇಲ್ಲ ಎಂದು ಕಾರ್ಯಕರ್ತರ ಮುಂದೆ ಘೋಷಣೆ ಮಾಡಿದ್ದಾರೆ. ಹೀಗಿದ್ದೂ ಸಿದ್ದು ಬೆಂಬಲಿಗರು, ಡಿಕೆಶಿ ಬೆಂಬಲಿಗರ ನಡುವೆ ಮುಂದಿನ ಸಿಎಂ ಎಂಬ ನೇರ ಮಾತಿಗೆ ಕಡಿವಾಣ ಬಿದ್ದಿದ್ದೆಯೇ ಎಂಬುದು ಪ್ರಶ್ನೆಯಾಗಿದೆ. ಸದ್ಯ ರಾಜ್ಯ ಕಾಂಗ್ರೆಸ್ಸಿಗರ ನಡೆ ಇಂತಹದ್ದೊಂದು ಕುತೂಹಲಕ್ಕೆ ಕಾರಣವಾಗಿದೆ.
Advertisement
ಸಿದ್ದರಾಮೋತ್ಸವ ಘೋಷಣೆ ಆಗುತ್ತಿದ್ದಂತೆ ಮುಂದಿನ ಸಿಎಂ ಗದ್ದಲ ಜೋರಾಗಿತ್ತು. ಆದರೆ ಸಿದ್ದರಾಮೋತ್ಸವದ ವೇದಿಕೆ ಮೇಲೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರು ಬಹಿರಂಗವಾಗಿಯೇ ಕದನ ವಿರಾಮ ಘೋಷಣೆ ಮಾಡಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಇನ್ನು ಮುಂದೇಯೂ ಇದು ಮುಂದುವರಿಯುತ್ತಾ? ಸಿಎಂ ಜಗಳಕ್ಕೆ ತಾತ್ಕಾಲಿಕವಾಗಿಯಾದರೂ ಬ್ರೇಕ್ ಬೀಳುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ
Advertisement
Advertisement
ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಸಿದ್ದರಾಮೋತ್ಸವ ನಡೆದಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಸಿದ್ದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‌ಗೆ ಬಲ ತುಂಬಲು ಸಾಕ್ಷಿಯಾಗಿದ್ದಾರೆ. ಕಾರ್ಯಕ್ರಮ ಮುಗಿಸಿ ವಾಪಸ್ ಹೊರಟ ಜನರಿಂದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಕಿಲೋಮೀಟರ್ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
Advertisement
ಕಾರ್ಯಕ್ರಮ ಮುಗಿದು 4-5 ಗಂಟೆಗಳೇ ಕಳೆದ್ರೂ ವಾಹನ ದಟ್ಟಣೆ ಕರಗಲು ಸುಮಾರು ಗಂಟೆಗಳೇ ಬೇಕಾಯ್ತು. ರಾತ್ರಿ ಸಿದ್ದರಾಮಯ್ಯ ಚಿತ್ರದುರ್ಗದ ಸಿರಿಗೆರೆ ತರಳಬಾಳು ಮಠಕ್ಕೆ ಭೇಟಿ ನೀಡಿದ್ರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದ್ರು. ಬಳಿಕ ಚಿತ್ರದುರ್ಗದ ಮುರುಘಾಮಠಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದ್ರು. ಈ ವೇಳೆ ಅನ್ನದಾತ ಸಿದ್ಧರಾಮಯ್ಯಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ರು. ಇದನ್ನೂ ಓದಿ: ವಿದ್ಯಾರ್ಥಿಯಿಂದ ಅವಾಚ್ಯ ಪೋಸ್ಟ್- ಕಾಲೇಜು ವೇದಿಕೆಯಲ್ಲೇ ಕಣ್ಣೀರಿಟ್ಟ ಸಾ.ರಾ ಮಹೇಶ್
ಒಟ್ಟಿನಲ್ಲಿ ಸಿದ್ದರಾಮೋತ್ಸವ ಕಾಂಗ್ರೆಸ್‌ಗೆ ಬಲ ತುಂಬುವ ಜೊತೆಗೆ ಕಾಂಗ್ರೆಸ್ ವರ್ಚಸ್ಸನ್ನು ಹೆಚ್ಚಿಸಲು ಕಾರಣವಾಯಿತು ಎಂದು ಕಾಂಗ್ರೆಸ್ಸಿಗರ ನಂಬಿಕೆ. ಆದರೆ ಸಿದ್ದು-ಡಿಕೆಶಿ ನಡುವೆ ಮತ್ತೆ ಸಿಎಂ ಕುರ್ಚಿ ಕಿತ್ತಾಟಕ್ಕೆ ವಾಕ್ಸಮರ ಮುಂದುವರಿಯಲಿದೆಯೇ ಎಂಬುದೇ ಪ್ರಶ್ನೆಯಾಗಿದೆ.