– ಈ ಹಿಂದೆ ಡಿಕೆಶಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಶಾಸಕ
ದಾವಣಗೆರೆ: ಇದೇ ಅವಧಿಯಲ್ಲಿ ಡಿ.ಕೆ ಶಿವಕುಮಾರ್‌ಗೆ (D.K Shivakumar) ಸಿಎಂ ಆಗುವ ಅವಕಾಶ ಬರಲಿದೆ ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ (Basavaraj Shivaganga) ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಈಗ ಸಿಎಂ ಆಗುವ ಪಪೋಟಿ ಇಲ್ಲ. ಸಿದ್ದರಾಮಯ್ಯನವರಿಗೆ 136 ಶಾಸಕರು ನೈತಿಕವಾಗಿ ಬೆಂಬಲ ನೀಡುತ್ತೇವೆ. ಆದರೆ ಡಿ.ಕೆ ಶಿವಕುಮಾರ್ ಸಿಎಂ ಆಗುವ ಅವಕಾಶ ಬರಲಿದೆ. ಅದು ಯಾರಿಗೋ ನೋವು ಕೊಟ್ಟು ಸಿಎಂ ಆಗುವಂತಹ ಸಂದರ್ಭ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು – ಈಶ್ವರ್ ಖಂಡ್ರೆ ಕಿಡಿ
Advertisement
ಡಿಕೆಶಿ ಸಿಎಂ ಆಗೋದು ಖಚಿತ, ಮೊದಲಿನಿಂದಲೂ ನಾನು ಇದನ್ನು ಹೇಳುತ್ತಿದ್ದೇನೆ. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಆದರೆ ಈ ಸಂದರ್ಭದಲ್ಲಿ ಬೇಡ ಎಂದು ಅವರು ಹೇಳಿದ್ದಾರೆ.
Advertisement
ಮುಡಾ ಪ್ರಕರಣದಲ್ಲಿ (MUDA Case) ಸಿಎಂ ಪ್ರಾಸಿಕ್ಯೂಷನ್ ತಡೆ ಕೋರಿ ಹಾಕಿದ್ದ ಅರ್ಜಿ ವಜಾ ಆಗಿದೆ. ಇದು ಕೋರ್ಟ್ ವಿಷಯ, ಅದರ ವಿರುದ್ಧ ಮಾತನಾಡಬಾರದು. ಆದರೆ ಇದೊಂದು ಷಡ್ಯಂತ್ರ. ರಾಜ್ಯಪಾಲರ ಮೂಲಕ ಬಿಜೆಪಿ ಕುತಂತ್ರ ಮಾಡುತ್ತಿದೆ. ಹಿಂಬಾಗಿಲಿನಿಂದ ಸರ್ಕಾರ ಕೆಡವಲು ಕುತಂತ್ರ ಮಾಡುತ್ತಿದ್ದಾರೆ. ಜೊಲ್ಲೆ, ರೆಡ್ಡಿ, ಕುಮಾರಸ್ವಾಮಿ ವಿರುದ್ಧ ತನಿಖಾಧಿಕಾರಿಗಳು ಪ್ರಾಸಿಕ್ಯೂಷನ್ ಕೇಳಿದ್ರೂ ಕೊಟ್ಟಿಲ್ಲ. ತನಿಖಾ ಸಂಸ್ಥೆಗಳು ಅನುಮತಿ ಕೇಳಿದ್ರೂ ಕೊಡದೇ ಇರುವವರು ಕೇವಲ ಸಾಮಾಜಿಕ ಕಾರ್ಯಕರ್ತ ಕೇಳಿದ ಕೂಡಲೇ ಕೊಟ್ಟಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ನಾವು ಯಾವುದಕ್ಕೂ ಬಗ್ಗಲ್ಲ, ನಮ್ಮ ಪಕ್ಷದ ಮುಖಂಡರು ಸಿಎಂ ಬೆಂಬಲಕ್ಕೆ ನಿಲ್ಲುತ್ತೇವೆ. ತನಿಖೆ ನಡೆದು ತೀರ್ಪು ಬಂದಿಲ್ಲ, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರ ಷಡ್ಯಂತ್ರ ನಡೆಯಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಶಾಸಕ ಬಸವರಾಜ್ ಶಿವಗಂಗಾ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಿದ್ದರು. ಅವರು ನನ್ನ ಆರಾಧ್ಯ ದೈವ ಡಿ.ಕೆ ಶಿವಕುಮಾರ್ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆಂದು ಪ್ರತಿಜ್ಞೆ ಸ್ವೀಕರಿಸಿದ್ದರು. ಈ ಹಿಂದೆಯೂ ಡಿಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಗಣೇಶನ ಶಾಪ ತಟ್ಟಿದೆ: ಆರ್.ಅಶೋಕ್