ಕಾಂಗ್ರೆಸ್‌ ಸರ್ಕಾರದಲ್ಲಿ ಒಂದೇ ಡಿಸಿಎಂ – ಎಐಸಿಸಿ ಅಧಿಕೃತ ಘೋಷಣೆ

Public TV
1 Min Read
DK Shivakumar Siddaramaiah Mallikarjun Kharge

ನವದೆಹಲಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ (AICC) ಅಧಿಕೃತವಾಗಿ ತಿಳಿಸಿದೆ.

ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸುರ್ಜೇವಾಲಾ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

DK SHIVAKUMAR SIDDARAMAIAH

ಈ ವೇಳೆ ಒಂದೇ ಡಿಸಿಎಂ ಹುದ್ದೆ ಸರ್ಕಾರದಲ್ಲಿ ಇರಲಿದೆ. ಮುಂದಿನ ಲೋಕಸಭಾ ಚುನಾವಣೆ ನಡೆಯುವರೆಗೂ ಡಿಕೆ ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಷ್ಟು ಸಮಯದವರೆಗೆ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರದಲ್ಲಿ ಇರಲಿದ್ದಾರೆ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ. ಕರ್ನಾಟಕ ಜನರ ಸೇವೆ ಮಾಡಲು ಕಾಂಗ್ರೆಸ್‌ ಬದ್ಧವಾಗಿದೆ. 5 ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲಿದೆ ಎಂದು ವಿವರಿಸಿದರು.  ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?

 

 

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಲ್ಡೋಜರ್‌ ಬುಲ್ಡೋಜರ್‌ ಮಾಡಿ ಕೆಳಗೆ ಹಾಕುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಪ್ರತಿಯೊಬ್ಬ ಕನ್ನಡಿಗನ ಜಯ. ಇಬ್ಬರಲ್ಲೂ ಸರ್ಕಾರ ನಿಭಾಯಿಸುವ ಶಕ್ತಿ ಇದೆ. ಇದೇ ರೀತಿ ಹಲವು ನಾಯಕರಲ್ಲೂ ಶಕ್ತಿ ಇದೆ. ಆದರೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಬೇರೆ ಸಮುದಾಯದ ನಾಯಕರು ನಮ್ಮ ಸಮುದಾಯಕ್ಕೂ ಡಿಸಿಎಂ ಪಟ್ಟ ಕೇಳುತ್ತಿದ್ದಾರೆ ಎಂಬ ಪಬ್ಲಿಕ್‌ ಟಿವಿಗೆ ಪ್ರಶ್ನೆಗೆ ವೇಣುಗೋಪಾಲ್‌, ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಡಿಸಿಎಂ ನೀಡಲಾಗುತ್ತದೆ. ಸಚಿವ ಸ್ಥಾನದಲ್ಲಿ ಎಲ್ಲಾ ಸಮುದಾಯದವರಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಉತ್ತರಿಸಿದರು.

Share This Article