Wednesday, 18th July 2018

ಐಟಿ ದಾಳಿ ಬಳಿಕ ಇಂದು ಡಿಕೆಶಿ ದಂಪತಿ ಕಬ್ಬಾಳಮ್ಮ ದೇವಸ್ಥಾನಕ್ಕೆ ಭೇಟಿ

ರಾಮನಗರ: ಐಟಿ ದಾಳಿ ಬಳಿಕ ಇಂದು ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿನ ಕಬ್ಬಾಳಮ್ಮ ದೇವಾಲಯಕ್ಕೆ ಇಂಧನ ಸಚಿವ ಡಿಕೆ ಶಿವಕುಮಾರ್ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿಕೆಶಿ ಪತ್ನಿ ಉಷಾ ಜೊತೆ ದೇವಾಲಯಕ್ಕೆ ಭೇಟಿ ನೀಡಿದರು. ಐಟಿ ದಾಳಿ ನಂತರದ ದಿನ ತಮ್ಮ ಇಷ್ಟದ ದೇವರ ದೇವಾಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಆದರೆ ಅಂದು ಗುಜರಾತ್ ಶಾಸಕರ ಉಸ್ತುವಾರಿ º ಡಿಕೆಶಿಗೆ ದೇವಾಲಯಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು.

ದೇವಾಲಯಕ್ಕೆ ಬಂದಿದ್ದ ಭಕ್ತಾದಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮಾಡಿಸಿದ್ದ ಪ್ರಸಾದವನ್ನು ಡಿಕೆಶಿ ದಂಪತಿ ವಿತರಿಸಿದರು. ತಾವು ಸಹ ದೇವರ ಪ್ರಸಾದವನ್ನು ಸ್ವೀಕರಿಸಿದರು.

Leave a Reply

Your email address will not be published. Required fields are marked *