ಚಿಕ್ಕಬಳ್ಳಾಪುರ: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಪತ್ನಿ ಸಮೇತ ಘಾಟಿ ಸುಬ್ರಮಣ್ಯ ಸ್ವಾಮಿಯ (Ghati Subramanya Temple) ದರ್ಶನ ಪಡೆದಿದ್ದಾರೆ.
ವಿಶೇಷ ಪೂಜೆ ಹಾಗೂ ಅಭಿಷೇಕದಲ್ಲಿ ಡಿಕೆಶಿ ಹಾಗೂ ಅವರ ಪತ್ನಿ ಭಾಗಿಯಾದರು. ದೇವರ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದೆ. ಹಾಗಾಗಿ ಘಾಟಿ ದೇವರ ದರ್ಶನಕ್ಕೆ ಆಗಮಿಸಿದ್ದೇನೆ. ಘಾಟಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರ ಸಹ ಮಾಡಿದ್ದೇವೆ. ನಾನು ಸಹ 30 ವರ್ಷದ ಹಿಂದೆ ಇಲ್ಲಿ ಸರ್ಪ ಸಂಸ್ಕಾರ ಮಾಡಿಸಿದ್ದೇನೆ. ದೇವಾಲಯದ ಅಭಿವೃದ್ಧಿಯನ್ನು ಕೆ.ಎಚ್ ಮುನಿಯಪ್ಪ ಮುಂದಾಳತ್ವದಲ್ಲಿ ಮಾಡಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಶ್ರದ್ಧಾ, ಭಕ್ತಿಯಿಂದ ನಡೆದ ಐತಿಹಾಸಿಕ ಬೆಂಗಳೂರು ಕರಗ ಶಕ್ತೋತ್ಸವ
ಜಾತಿಗಣತಿ ಬಗ್ಗೆ ಕೇಳಿದ ಪ್ರಶ್ನೆಗೆ, ಜಾತಿಗಣತಿ ವಿಚಾರ ಬಗ್ಗೆ ಸಿಎಂ ಹೇಳಿದ್ದಾರೆ. ನಾನು ವರದಿ ನೋಡಿಲ್ಲ. ಶನಿವಾರ ಬೆಳಗಾವಿ ಹಾಗೂ ಮಂಗಳೂರಿಗೆ ಹೋಗಿದ್ದೆ. ಅದು ಕ್ಯಾಬಿನೆಟ್‌ನಲ್ಲಿ ಚರ್ಚೆ ಅಗಬೇಕು. ಆತುರದ ನಿರ್ಧಾರ ಯಾರೂ ತೆಗೆದುಕೊಳ್ಳುವುದಿಲ್ಲ. ಕೆಲವರು ರಾಜಕೀಯ ಹೇಳಿಕೆ ಕೊಡ್ತಾರೆ. ಸತ್ಯಾಂಶ ಏನು ಎಂದು ತಿಳಿದುಕೊಂಡು ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಜೆಡಿಎಸ್ ಪ್ರತಿಭಟನೆ ವಿಚಾರವಾಗಿ, ರಾಜಕಾರಣ ಬೇಡ ಅವರಿಗೆ ಒಳ್ಳೆಯದಾಗಲಿ.
ದೇವಾಲಯಕ್ಕೆ ಡಿಸಿಎಂ ಭೇಟಿ ಸಾರ್ವಜನಿಕರಿಗೆ ದರ್ಶನ ಬಂದ್ ಮಾಡಲಾಗಿತ್ತು. ಡಿ.ಕೆ ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಮತ್ತು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸಾಥ್ ನೀಡಿದ್ದಾರೆ. ಡಿಕೆಶಿ ದೇವಾಲಯಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: Photo Gallery | ಸಾಂಸ್ಕೃತಿಕ, ಪರಂಪರೆ ಹೆಗ್ಗುರುತು ಸಾರಿದ ಕರಗ ಶಕ್ತ್ಯೋತ್ಸವ