ಬೆಂಗಳೂರು: ಬಿಜೆಪಿ ಸರ್ಕಾರ ನಮ್ಮನ್ನು ಕಾಮಾಲೆ ಕಣ್ಣಿನಿಂದ ನೋಡ್ತಿದೆ. ನಮ್ಮ ಹೋರಾಟ ಅಂದ್ರೆ ಯಾವಾಗಲೂ 144 ಸೆಕ್ಷನ್ ಹಾಕ್ತಾರೆ. ನಾವೇನು ಮಡಿಕೇರಿಗೆ ಕುಸ್ತಿ ಮಾಡೋಕೆ ಹೋಗ್ತಿದ್ದೀವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 27ರ ವರೆಗೆ ಸೆಕ್ಷನ್ 144 ಜಾರಿಗೊಳಿಸಿರುವ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭಯದಿಂದಲೇ ನಡೆಯುತ್ತಿದೆ. ನಮ್ಮ ಹೋರಾಟ ಅಂದ್ರೆ ಅಲ್ಲಿ 144 ಸೆಕ್ಷನ್ ಇರುತ್ತೆ. ನಾವೇನು ಅಲ್ಲಿ ಕುಸ್ತಿ ಮಾಡೋಕೆ ಹೋಗ್ತಿದ್ದೀವಾ? ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಪ್ರಶ್ನೆ ಅಂತಾರೆ. ಮೊದಲಾಗಿ `ಲಾ’ನೇ ಇಲ್ಲ ಇನ್ನೂ ಆರ್ಡರ್ ಎಲ್ಲಿ ಬಂತು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೀರಿ: ಡಿ.ಕೆ.ಶಿವಕುಮಾರ್
Advertisement
Advertisement
ಹೋರಾಟ ಜೈಲು, ಕೇಸು ಇದಕ್ಕೆಲ್ಲಾ ನಾವು ಹೆದರಲ್ಲ. ಮಡಿಕೇರಿಗೆ 5 ಕಡೆಯಿಂದ ಪ್ರವೇಶ ಮಾಡಬಹುದು. ಎಲ್ಲಾ ಮಾರ್ಗವನ್ನು ಪೊಲೀಸರು ಸೀಲ್ ಮಾಡ್ತಿದಾರಂತೆ ಯಾರೂ ಹೋಗದಂತೆ ತಡಿತಾರಂತೆ. ನಿನ್ನೆ ಸಂಜೆಯಿಂದಲೇ ನಾನು ಎಲ್ಲಿಗೆ ಹೋಗುತ್ತೇನೆ? ಯಾರೊಂದಿಗೆ ಮಾತನಾಡುತ್ತೇನೆ? ಯಾರಿಗೆ ಫೋನ್ ಮಾಡುತ್ತೇನೆ? ಎಲ್ಲಾ ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯ ಏನು ಮಾಡ್ತಿದಾರೆ ಅನ್ನೋದನ್ನೂ ಗಮನಿಸುತ್ತಿದ್ದಾರೆ. ಮಡಿಕೇರಿಗೆ ಹೋಗಲು ಮುಂದಾದವರನ್ನು ಫಾಲೋ ಮಾಡ್ತಿದ್ದಾರಂತೆ ನಾವು ಇದಕ್ಕೆಲ್ಲಾ ಹೆದರೋದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ
Advertisement
Advertisement
ನಾನು ನಮ್ಮ ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತಡುತ್ತೇನೆ. ನಾವು ಹೋರಾಟ ಮಾಡೋವಾಗೆಲ್ಲಾ ಸೆಕ್ಷನ್ 144 ಜಾರಿಗೊಳಿಸೋದು, ನಮ್ಮ ಮೇಲೆ ಕೇಸು ಹಾಕೋದು ಸರ್ಕಾರಕ್ಕೆ ಒಂದು ಚಾಳಿ ಆಗಿದೆ. ಶಾಸಕಾಂಗ ಪಕ್ಷದ ನಾಯಕರೊಡನೆ ಮಾತನಾಡಿ ನಮ್ಮ ನಿರ್ಧಾರವನ್ನ ಟ್ವೀಟ್ ಮಾಡುತ್ತೇನೆ. ಆದರೆ ಹೋರಾಟದ ಬಗ್ಗೆ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳೋದಿಲ್ಲ. ಸಾಮೂಹಿಕವಾಗಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
Live Tv