ಡಿಕೆಶಿ ನೀಡಿದ್ದ ಸಲಹೆಯನ್ನು ತಿರಸ್ಕರಿಸಿದ್ದಕ್ಕೆ ಮಾಜಿ ಸಿಎಂ ವಿರುದ್ಧ ಸುಧಾಕರ್ ಕಿಡಿ

Public TV
2 Min Read
collage siddu dk sudhakar

– ಡಿಕೆ ಶಿವಕುಮಾರ್ ನಿಜವಾದ ರಾಜಕಾರಣಿ
– ನಿಮ್ಮಿಂದ ಕೀಳುಮಟ್ಟದ ರಾಜಕಾರಣ ನಿರೀಕ್ಷಿಸಿರಲಿಲ್ಲ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕರನ್ನು ಅನರ್ಹರನ್ನಾಗಿ ಮಾಡುವುದು ಬೇಡ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸಲಹೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಸುಧಾಕರ್ ಮಾತನಾಡಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು. ಈ ವೇಳೆ, ನಾವು ಕಾಂಗ್ರೆಸ್ ಪಕ್ಷ ಹಾಗೂ ನಿಮ್ಮ ನಾಯಕತ್ವವನ್ನ ಆರು ವರ್ಷಗಳ ಕಾಲ ಹೆಗಲ ಮೇಲೆ ಹೊತ್ತು ನಿಮ್ಮನ್ನ ರಕ್ಷಣೆ ಮಾಡಿದ್ದೇವೆ. ಸಿದ್ದರಾಮಯ್ಯನವರ ವಿರುದ್ಧ ಯಾರನ್ನ ಮಾತನಾಡಲು ಬಿಡುತ್ತಿರಲಿಲ್ಲ ನಾನು. ನಿಮಗಾಗಿ ಆ ರೀತಿಯ ಹೋರಾಟ ಮಾಡಿದ್ದೇವೆ. ನಮ್ಮನ್ನೇ ಅನರ್ಹ ಮಾಡಿಸ್ತೀರಲ್ಲ ನಿಮಗೆ ಹೃದಯ ಇದ್ಯಾ ಮನಸ್ಸು ಇದೆಯೇ ಎಂದು ಪ್ರಶ್ನಿಸಿದರು.

siddaramaiah 2 1

ಡಿಕೆ ಶಿವಕುಮಾರ್ ಸಭೆಯೊಂದರಲ್ಲಿ ಅನರ್ಹರನ್ನಾಗಿ ಮಾಡಿಸೋದು ಬೇಡ. ನಮ್ಮ ಜೊತೆ ಕಷ್ಟ ಸುಖ ಹಂಚಿಕೊಂಡವರು ಅವರು ಅಂತ ಅವರು ಹೇಳಿದರು. ಅವರು ನಿಜವಾದ ರಾಜಕಾರಣಿ. ಒಂದು ಬಾರಿ ಶಾಸಕರಾಗಬೇಕಾದರೆ ಪುನರ್ಜನ್ಮ ಪಡೆದಂತೆ ಹೀಗಾಗಿ ಅಂತವರನ್ನ ಅನರ್ಹ ಮಾಡಬೇಡಿ ಅಂತ ಹೇಳಿದ್ರಂತೆ. ಆದರೆ ಅವರ ಮಾತನ್ನು ಕೇಳದೆ ಅನರ್ಹ ಮಾಡಿಸಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು.

ನಿಮ್ಮ ಬಗ್ಗೆ ಬಹಳ ಗೌರವ ಇತ್ತು. ಇಂತಹ ತೀರ್ಮಾನ ಕೀಳು ಮಟ್ಟದ ರಾಜಕಾರಣ ನಿಮ್ಮಿಂದ ನೀರೀಕ್ಷಿಸರಲಿಲ್ಲ. ನಾನು ಜನರನ್ನು ನಂಬಿದ್ದೀನಿ ಹೀಗಾಗಿ ನನಗೆ ಸುಪ್ರೀಂಕೋರ್ಟ್ ನಲ್ಲಿ ನನಗೆ ನ್ಯಾಯ ಸಿಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ಕ್ರೌರ್ಯ ಹಾಗೂ ವಿಕೃತ ಮನಸ್ಸಿನಿಂದ ತಮ್ಮ ರಾಜಕೀಯ ದಿವಾಳಿತನವನ್ನ ರಾಜ್ಯದ ಜನರ ಮುಂದೆ ಪ್ರದರ್ಶನ ಮಾಡ್ತಿದ್ದಾರೆ. ಹಿಂದೆ ಕಾಂಗ್ರೆಸ್ ನಲ್ಲಿರೋರು ಬೇರೆ ಪಕ್ಷದಿಂದ ಬಂದಿರೋರಲ್ವಾ? ರಾಜೀನಾಮೆ ಕೊಟ್ಟೇ ತಾನೇ ಕಾಂಗ್ರೆಸ್ಸಿಗೆ ಬಂದಿರೋದು? ಅವರ್ಯಾದರೂ ಅನರ್ಹರಾಗಿದ್ದಾರಾ? ರಾಜೀನಾಮೆಯನ್ನ ಎರಡೇ ಗಂಟೆಯಲ್ಲಿ ಸ್ವೀಕಾರ ಮಾಡಿಲ್ವಾ? ಇತ್ತೀಚೆಗೆ ರಾಜ್ಯಸಭೆಯ ಸದಸ್ಯರ ರಾಜೀನಾಮೆ ಅರ್ಧ ಗಂಟೆಯಲ್ಲಿ ಸ್ವೀಕಾರ ಮಾಡಿಲ್ವಾ? ಹೀಗಾಗಿ ರಾಜ್ಯಸಭೆಗೆ, ಲೋಕಸಭೆ, ವಿಧಾನಸಭೆಗೊಂದು ನೀತಿ ಇದ್ಯಾ ಎಂದು ಖಾರವಾಗಿ ಪ್ರಶ್ನಿಸಿದರು.

DKShi

ಬಹಳ ಪೌರುಷ ತೋರಿಸುವ ನೀವು ರಣರಂಗದಲ್ಲಿ ನಮ್ಮನ್ನ ಎದುರಿಸಿ. ಜನರ ಮುಂದೆ ಹೇಳಿ. ೨೨೪ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ೭೯ ಗೆದ್ದಿದ್ದು ಯಾಕೆ? ಸಿಎಂ ಹಾದಿಯಾಗಿ ೧೭ ಮಂದಿ ಮಂತ್ರಿಗಳು ಸೋತ್ರಲ್ಲಾ? ೩೨ ಸಾವಿರ ಮತಗಳಿಂದ ಗೆದ್ದ ನನಗೆ ನೀವು ಯಾವ ಅಧಿಕಾರ ಕೊಟ್ಟಿದ್ದೀರಿ ಎಂದು ಖಾರವಾಗಿ ಕೈ ನಾಯಕರನ್ನು ಪ್ರಶ್ನಿಸಿದರು.

ಜನಪರವಾಗಿ ಕೆಲಸ ಮಾಡಿದ್ದಕ್ಕೆ ನಾನು ಗೆದ್ದೆ. ಜನರಿಗೆ ತೊಂದರೆ ಕೊಟ್ಟಿದ್ದ ಕಾರಣ ನೀವು ಅವತ್ತೇ ಚುನಾವಣೆಗೂ ಮುನ್ನವೇ ಜೆಡಿಎಸ್ ಜೊತೆ ಹೋಗ್ತೀವಿ ಅಂತ ಹೇಳಿದ್ದರೆ ಅವತ್ತೇ ನಾನು ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧೆ ಮಾಡುತ್ತಿರಲಿಲ್ಲ. ನಾನು ಕ್ಷೇತ್ರದಲ್ಲಿ ಹಗಲಿರುಳು ಜೆಡಿಎಸ್ ಜೊತೆ ಹೋರಾಡಿದ್ದೇನೆ. ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ಜೆಡಿಎಸ್ ಜೊತೆ ಸೇರಿದ್ದೀರಿ. ಬಿಜೆಪಿ ಹೊರಗಿಡಬೇಕು ಅಂತ ಸುಳ್ಳು ಹೇಳಿ ಅಧಿಕಾರದ ಆಸಗೆ ಜೆಡಿಎಸ್ ಜೊತೆ ಸೇರಿದ್ದೀರಿ. ಜನರಿಗೆ ಇದರಿಂದ ಒಳ್ಳೆಯದಾಯಿತೇ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *