ಬೆಂಗಳೂರು: ಪರಿಷತ್ ಆಯ್ಕೆಗೆ ಯಾವ ಮಾನದಂಡ, ಏನು ಎಂಬುದು ದೆಹಲಿಯಲ್ಲಿ ನಿಗದಿ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ಇಂದು ಸಿಎಂ-ಡಿಸಿಎಂ ದೆಹಲಿಗೆ ತೆರೆಳುತ್ತಿರುವ ಬಗ್ಗೆ ತಮ್ಮ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, 300ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲಾ ವರ್ಗಕ್ಕೂ ಅವಕಾಶ ಮಾಡಿಕೊಡಲು ಆಗಲ್ಲ. ಹಾಲಿ ಸದಸ್ಯರು ಕೆಲವರಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.
- Advertisement
ಎಲ್ಲಾ ವರ್ಗದಲ್ಲೂ ಇದ್ದಾರೆ. ಕೆಲವರಿಗೆ ಬ್ಲಾಕ್ ಮಟ್ಟದಲ್ಲಿ ಅಧಿಕಾರ ಸಿಕ್ಕಿದೆ. ಕೆಲವರಿಗೆ ಜಿಲ್ಲಾ ಮಟ್ಟದಲ್ಲಿ ಸಿಕ್ಕಿದೆ ನೋಡೋಣ. ಇರುವ 7 ಸೀಟಲ್ಲಿ ಎಲ್ಲರೂ ಕೇಳ್ತಿದ್ದಾರೆ. ಕರಾವಳಿಯವರು ಕೇಳ್ತಿದ್ದಾರೆ, ಮಲ್ನಾಡವ್ರು ಕೇಳ್ತಾರೆ, ಹಳೇ ಮೈಸೂರು ಭಾಗದವರು ಕೇಳ್ತಿದ್ದಾರೆ. ಮುಂಬೈ ಕರ್ನಾಟಕ ಕೇಳ್ತಿದ್ದಾರೆ. ಬಹಳ ಕಷ್ಟಕರವಾದಂತಹ ಪರಿಸ್ಥಿತಿಯಲ್ಲಿ ಇದ್ದೇವೆ. ಯಾವ ಮಾನದಂಡದ ಮೇಲೆ ಆಯ್ಕೆ ಮಾಡಬೇಕು ಎಂಬುದನ್ನು ದೆಹಲಿಯಲ್ಲಿ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
- Advertisement
ಇದೇ ವೇಳೆ ಪರಮೇಶ್ವರ್ (G Parameshwar) ಅಸಮಾಧಾನದ ಬಗ್ಗೆ ಮಾತನಾಡಿದ ಡಿಕೆಶಿ, ಖಂಡಿತವಾಗಿಯೂ ಅವರ ಮಾತನ್ನ ಕೇಳುತ್ತೇವೆ. ನಗುತ್ತಲೇ ಉತ್ತರಿಸಿದರು. ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುವ ಬಗ್ಗೆ ನಿಮ್ಮ ಹತ್ರ ಏನಾದ್ರೂ ಮಾಹಿತಿ ಇರಬಹುದು ನೋಡಿ ಎಂದಿದ್ದಾರೆ.