ಬೆಂಗಳೂರಿನಲ್ಲಿ 100 ಕಿಮೀ ಫ್ಲೈಓವರ್‌ ನಿರ್ಮಿಸುವ ಚಿಂತನೆಯಿದೆ: ಡಿ.ಕೆ ಶಿವಕುಮಾರ್‌

Public TV
2 Min Read
DK Shivakumar 01

– ಡಬಲ್‌ ಡೆಕ್ಕರ್‌ ಮೇಲ್ಸೇತುವೆ ʻರಾಮಲಿಂಗಾ ರೆಡ್ಡಿ ಮಾಡೆಲ್‌ʼ ಎಂದ ಡಿಸಿಎಂ

ಬೆಂಗಳೂರು: ನಗರದಲ್ಲಿ 100 ಕಿಮೀ ಸಿಗ್ನಲ್ ಫ್ರೀ ಮಾಡಬೇಕು. ಅದಕ್ಕಾಗಿ 100 ಕಿಮೀ ಫ್ಲೈಓವರ್‌ (100 KM Flyover) ನಿರ್ಮಿಸುವ ಚಿಂತನೆಯಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಹೇಳಿದರು.

DK Shivakumar

ರಾಗಿಗುಡ್ಡದಲ್ಲಿ (Ragigudda) ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆ (Double-Deck Flyover) ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬುಧವಾರ ಸಿಎಂ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಸಾರಿಗೆ ಸಚಿವರೂ ಸಹ ಇದ್ದರು. ಬೆಂಗಳೂರಲ್ಲಿ (Bengaluru) ಸುಮಾರು 100 ಕಿಮೀ ಫ್ಲೈಓವರ್‌ ಮಾಡುವ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ದಕ್ಷಿಣ ಭಾರತದ ಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆ – ಪ್ರಾಯೋಗಿಕ ಸಂಚಾರಕ್ಕೆ ಡಿಕೆಶಿ ಚಾಲನೆ!

South Indias first double deck flyover to open in Bengaluru

ರಾಮಲಿಂಗಾ ರೆಡ್ಡಿ ಮಾಡೆಲ್‌ ಅಂತಲೇ ಕರೀಬೇಕು:
ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನ. ಮನಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹಾಗಾಗಿ ಈ ಹುಟ್ಟು-ಸಾವಿನ ಮಧ್ಯೆ ಏನು ಮಾಡುತ್ತೇವೆ ಅನ್ನೋದು ಮುಖ್ಯ. ನಾನು ಹೇಗೆ ಬೆಂಗಳೂರು ಮಂತ್ರಿಯಾಗಿದ್ದೇನೋ, ರಾಮಲಿಂಗಾ ರೆಡ್ಡಿ ಅವರೂ ಸಹ ಬೆಂಗಳೂರು ಮಂತ್ರಿ ಆಗಿದ್ದವರು. ಅವರೇ ಈ ಡಬಲ್ ಡೆಕ್ಕರ್ ಮಾದರಿಯನ್ನ ತಂದಿದ್ದಾರೆ. ನನಗೆ ಉದ್ಘಾಟನೆ ಮಾಡುವ ಭಾಗ್ಯ ಸಿಕ್ಕಿದೆ. ಮುಂದೆ ಈ ರೀತಿ ಯಾವುದೇ ಡಬಲ್ ಡೆಕ್ಕರ್ ಪ್ಲೈಓವರ್ ಬಂದರೇ, ಅದಕ್ಕೆ ರಾಮಲಿಂಗಾ ರೆಡ್ಡಿ ಮಾಡಲ್ ಅಂತಲೇ ಕರಿಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ; ಎಕ್ಸ್‌ನಲ್ಲಿ ಪೋಸ್ಟ್‌ ಡಿಲೀಟ್‌ ಮಾಡಿದ ಸಿಎಂ

ರಾಮಲಿಂಗಾ ರೆಡ್ಡಿ ಅವರು ಮೊದಲಬಾರಿಗೆ ಡಬಲ್‌ ಡೆಕ್ಕರ್‌ ಮಾದರಿ ಪರಿಚಯಿಸಿದ್ದಾರೆ. ನಾಗ್‌ಪುರದಲ್ಲಿಯೂ ಇಂತಹ ಪ್ರಯೋಗ ಮಾಡಿದ್ದಾರೆ. ಇದನ್ನ ನೋಡಿಕೊಂಡು ಮುಂದೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮಾಡುತ್ತೇವೆ. ಹಣ ಹೆಚ್ಚಾದರೂ ಪರವಾಗಿಲ್ಲ. ಇದೇ ಮಾದರಿ ಮಾಡಲು ತೀರ್ಮಾನ ಮಾಡಿದ್ದೇವೆ. ಸಿಎಂ ಬಳಿ ನಾನು ಮತ್ತು ನಮ್ಮ ಅಧಿಕಾರಿಗಳೂ ಇದನ್ನ ಪ್ರಸ್ತಾಪಿಸಿದ್ದಾರೆ. ಒಟ್ಟಾರೆ ಈ ಯೋಜನೆಗೆ ಮೂಲ ಕಾರಣವೇ ರಾಮಲಿಂಗಾ ರೆಡ್ಡಿ. ಇದು ರಾಮಲಿಂಗಾ ರೆಡ್ಡಿ ಮಾಡೆಲ್‌ ಅಂತಾ ಹೇಳಲು ಇಚ್ಛಿಸುತ್ತೇನೆ. ಇದರಿಂದ ಸಾಕಷ್ಟು ಜನರಿಗೆ ಉಪಯೋಗ ಆಗಲಿದೆ. ಮುಂದೆ ಮೆಟ್ರೋ, ಬಿಬಿಎಂಪಿ ಸಹಯೋಗದಲ್ಲಿ ಇಂತಹ ಯೋಜನೆಗಳು ಆಗಲಿ ಎಂದು ಆಶಿಸಿದರು. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ; ವಿಧಾನಸಭೆ ಅಧಿವೇಶನದಲ್ಲಿ ಬಿಲ್ ಮಂಡನೆಗೆ ಗ್ರೀನ್ ಸಿಗ್ನಲ್

Share This Article