– ಲೋಕಸಭಾ ಚುನಾವಣೆ ಶಾಕ್‌ನಿಂದ ನಾವು ಇನ್ನೂ ಹೊರಬಂದಿಲ್ಲ ಎಂದ ಡಿಸಿಎಂ
ಬೆಂಗಳೂರು: ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆಗೆ ಒತ್ತಡ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿ (Channapatna Candidate) ಆಯ್ಕೆ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್ಚುಕಡಿಮೆ ಎಲ್ಲಾ ಫೈನಲ್ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ ಅವರು ನೋಡಿಕೊಳ್ತಾರೆ. ನಮ್ಮ ಪ್ರಸ್ತಾವನೆಯನ್ನ ದೆಹಲಿಗೆ ಕಳುಹಿಸುತ್ತೇವೆ. ದೆಹಲಿ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಮ್ಲಾದಲ್ಲಿ ಅಕ್ರಮ ಮಸೀದಿ ತೆರವು ಕಾರ್ಯ ಆರಂಭ – 5 ಮಹಡಿಯ ಕಟ್ಟಡದಲ್ಲಿ 3 ಮಹಡಿ ಅಕ್ರಮ ನಿರ್ಮಾಣ
Advertisement
Advertisement
ಭಾನುವಾರ (ನಿನ್ನೆ) ಸಿಎಂ ನಿವಾಸದಲ್ಲಿ ಸಚಿವರ ಸಭೆಯಲ್ಲೇ ಆಲ್‌ಮೋಸ್ಟ್ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದೇವೆ. ನಮ್ಮ ಸಚಿವರ ಅಭಿಪ್ರಾಯ ಕೇಳಿ, ಅವರಿಗೂ ಜವಾಬ್ದಾರಿ ಕೊಟ್ಟಿದ್ದೇವೆ. ಎಲೆಕ್ಷನ್ (By Election) ಕಮೀಟಿ ಸಭೆ ಕರೆಯೋ ಬದಲು. ಕ್ಯಾಬಿನೆಟ್ ಮಿನಿಸ್ಟರ್ಸ್ ಹಾಗೂ ಯಾರಿಗೆ ಜವಾಬ್ದಾರಿ ವಹಿಸಿದ್ವಿ ಅವರನ್ನೆಲ್ಲ ಕೇಳಿದ್ದೇವೆ. ನಮ್ಮ ಪ್ರಸ್ತಾವನೆಯನ್ನು ದೆಹಲಿಗೆ ಕಳಿಸಿಕೊಡುತ್ತೇವೆ. ಹೈಕಮಾಂಡ್ ನಾಯಕರು ಬೇರೆಯವರೊಂದಿಗೂ ವೈಯಕ್ತಿಕವಾಗಿ ಮಾತನಾಡುತ್ತಾರೆ. ಮಾತನಾಡಿ ತಿರ್ಮಾನ ಮಾಡುತ್ತಾರೆ. ಎಷ್ಟು ಅರ್ಜಿ ಬಂದಿದ್ದಾವೆ ಎಂಬುದನ್ನ ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ: ಗೌರವದಿಂದ ಬಾಳಿ ಬದುಕೋಣ, ದಾಳಿ ನಿಲ್ಲಿಸಿ – ಪಾಕಿಸ್ತಾನಕ್ಕೆ ಫಾರೂಕ್ ಅಬ್ದುಲ್ಲಾ ಮನವಿ
Advertisement
Advertisement
ಇನ್ನೂ ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಜ ಡಿ.ಕೆ.ಸುರೇಶ್ ಸ್ಪರ್ಧೆಗೆ ನಮ್ಮ ಕಾರ್ಯಕರ್ತರು ಹೇಳ್ತಾ ಇದ್ದಾರೆ. ಆದ್ರೆ ಪಾರ್ಟಿ ಹೈಕಮಾಂಡ್ ಏನು ಹೇಳುತ್ತೆ ಅದೇ ಫೈನಲ್. ಲೋಕಸಭಾ ಚುನಾವಣೆ ಶಾಕ್‌ನಿಂದ ನಾವು ಇನ್ನೂ ಹೊರಬಂದಿಲ್ಲ. ಸುರೇಶ್ ಅವರ ಸೋಲು ನಮಗೆ ಆಘಾತ ತಂದಿದೆ. ಅದು ಚಿಕ್ಕ ಅಂತರ ಆಗಿದ್ರೆ ಪರವಾಗಿಲ್ಲ ಎಂದಿದ್ದಾರೆ ಎಂದು ಲೋಕಸಭಾ ಚುನಾವಣೆ ಸೋಲನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಪೊಲೀಸರು ಮುಕ್ತ, ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ: ಸಿಎಂ