– ಪವರ್ ಶೇರಿಂಗ್ ವಿಚಾರಕ್ಕೆ ಡಿಸಿಎಂ ಹೇಳಿದ್ದೇನು?
ಬೆಂಗಳೂರು: ನಮ್ಮ ಸರ್ಕಾರ ಸುಭದ್ರವಾಗಿದೆ, ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿ ಕೆಲಸ ಮಾಡ್ತಿದ್ದಾರೆ. ಯಾವ ಸ್ವಾಮೀಜಿ, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.
ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗ್ತಾರೆʼ ಎಂಬ ನಯ್ ಗುರೂಜಿ ಭವಿಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ. ನಮ್ಮ ಸರ್ಕಾರದ ವಿಚಾರದಲ್ಲಿ ತಮ್ಮ ಯಾವ ಹೇಳಿಕೆ ಬೇಡ. ನಮ್ಮ ಸರ್ಕಾರ (Congress Government) ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಕೆಲಸ ಮಾಡ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ಯಾರೂ ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಎಂದು ಕುಟುಕಿದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವುದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ
Advertisement
Advertisement
ಪವರ್ ಶೇರಿಂಗ್ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪವರ್ ಇಲ್ಲ, ಯಾವ ಶೇರಿಂಗೂ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದರು. ಇದನ್ನೂ ಓದಿ: ಹೋಟೆಲ್‌ಗಳ ಮೇಲೆ ಲಾರಿ ಪಲ್ಟಿ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿ
Advertisement
ಜಾತಿ ಜನಗಣತಿಗೆ ಪ್ರಬಲ ಸಮುದಾಯಗಳ ವಿರೋಧ ವಿಚಾರ ಕುರಿತು ಮಾತನಾಡಿ, ಜಾತಿ ಜನಗಣತಿಗೆ ಸಂಬಂಧಿಸಿದಂತೆ ಯಾವ ಸಭೆಯೂ ಇಲ್ಲ. ಸಿಎಂ ಕ್ಯಾಬಿನೆಟ್ ಸಭೆಗೆ ತರ್ತೀನಿ ಅಂತ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದರು.
Advertisement
ಅಲ್ಲದೇ, ನಾನು, ಸಿಎಂ ಸಭೆ ಕರೆದಿದ್ದೇವೆ. ಎಲ್ಲಾ ಸಭೆ ರದ್ದು ಮಾಡಿ ಸಂಜೆ ಪದಾಧಿಕಾರಿಗಳ ಇತರೆ ಸಭೆ ಇದೆ. ಸುರ್ಜೇವಾಲ ಬರ್ತಾರೆ, ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ಎಂಎಲ್‌ಎ, ಮಂತ್ರಿಗಳಿಗೆ ಜವಾಬ್ದಾರಿ ಕೊಡಬೇಕಿದೆ. ನಾಳೆ ಸಿಎಂ, ನಾನು ದೆಹಲಿಗೆ ಹೋಗ್ತಿದ್ದೇವೆ. ದೆಹಲಿಯಲ್ಲಿ ಹೊಸ ಕಟ್ಟಡ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?
ಎಲ್ಲಾ ಇಲಾಖೆಯಲ್ಲಿ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ ಅಂತ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದಾ.? ಅವರ ರೇಟ್ ಕಾರ್ಡಾ? ಅವರ ಕಾರ್ಡ್ ಫಿಕ್ಸ್ ಇರಬೇಕು. ಅವರ ಅನುಭವ ಮಾತಾಡ್ತಿದ್ದಾರೆ, ನನಗೆ ಗೊತ್ತಿಲ್ಲ. ಅದ್ಯಾವ್ದೋ ಪೂಜೆದೆಲ್ಲಾ ಹೇಳಿದ್ದಾರೆ ಅಲ್ವಾ.? ಅದು ಅವರ ಅನುಭವ. ಅವರು ಕದ್ದು ಮಾಡ್ತಾರೆ, ನಾನು ಓಪನ್ ಆಗಿ ಮಾಡ್ತೀನಿ, ದಿನಾ ಬೆಳಗ್ಗೆ ಪೂಜೆ ಮಾಡ್ತೀನಿ. ನಿಮ್ಮಂತವರು ತೊಂದರೆ ಕೊಡ್ತಾರೆ, ರಕ್ಷಣೆ ಕೊಡಪ್ಪಾ ಅಂತ ಮನವಿ ಮಾಡ್ತೀನಿ ಎಂದು ಹೆಚ್‌ಡಿಕೆಗೆ ಕುಟುಕಿದರು.