– ಬಿಜೆಪಿ-ಜೆಡಿಎಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕೋದು ಬೇಡವೆಂದ ಡಿಸಿಎಂ
ಬೆಂಗಳೂರು: ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ವಿಷಯ ಇಲ್ಲದೇ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿವೆ. ಮೋದಿ (DK Shivakumar) ಅವರು ಮೊದಲು ಕೊಟ್ಟಿರುವ ಭರವಸೆ ಈಡೇರಿಸುವ ಕೆಲಸ ಮಾಡಲಿ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡಲಿ ರಾಜ್ಯದಲ್ಲಿ ಜಾಗ ಬೇಕಿದ್ರೆ ಹೇಳಲಿ, ನಾನೇ ನಿಂತು ಜಾಗ ಕೊಡಿಸುತ್ತೇನೆ ಉದ್ಯೋಗ ನೀಡಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದರು.
Advertisement
ಕೆಪಿಸಿಸಿ (KPCC) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ, ಕುಮಾರಸ್ವಾಮಿಗೆ (HD Kumaraswamy) ನಮ್ಮ ಸರ್ಕಾರದ ಬಗ್ಗೆ ಹೇಳೋದಕ್ಕೆ ಏನೂ ಇಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ರು. ಯಾವ ಬಡವರಿಗೂ ಸಹಾಯ ಮಾಡಲಿಲ್ಲ. ಒಂದು ಕಾರ್ಯಕ್ರಮ ಕೋಡೋದಕ್ಕೆ ಆಗಲಿಲ್ಲ ಎಂದು ತಿವಿದರು. ಇದನ್ನೂ ಓದಿ: ಸೆಮಿಕಂಡಕ್ಟರ್ ವಹಿವಾಟು 100 ಶತಕೋಟಿ ಡಾಲರ್ ನತ್ತ: ಟಾಟಾ ಎಲೆಕ್ಟ್ರಾನಿಕ್ಸ್‌ನ ಮೂರ್ತಿ ದಸಾಕ
Advertisement
Advertisement
ಅನ್ನಭಾಗ್ಯ ಕಾರ್ಯಕ್ರಮ ಅವರು ಮಾಡಿದ್ರಾ? ಪಿಂಚಣಿ ಕೊಡೋ ಕಾರ್ಯಕ್ರಮ ಅವರು ಮಾಡಿದ್ರಾ? ಸೈಟ್ ಕೊಡೋ ಕಾರ್ಯಕ್ರಮ ಅವರು ಮಾಡಿದ್ರಾ, ಜಮೀನು ಕೊಟ್ರಾ..? ಈಗ ಕೆಲವರು ಸರ್ಕಾರಿ ನೌಕಕರಿದ್ದಾರೆ. ಅನುಕೂಲಸ್ಥರಿದ್ದಾರೆ ಅವರಿಗೆ ಎಲ್ಲಾ ಸಿಗ್ತಿದೆ. ಅದನ್ನ ಸರ್ವೇ ಮಾಡ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಅನುಕೂಲ ಇದೆ. ಬಡವರು ಯಾರು ಅನ್ನೋದು ಲಿಮಿಟೇಷನ್ ರಾಜ್ಯ ಸರ್ಕಾರವೇ ಮಾಡಿದೆ. ಕೆಲವರು ಜಿಎಸ್‌ಟಿ ಟ್ಯಾಕ್ಸ್ (GST Tax) ಕಟ್ಟುತ್ತಿದ್ದಾರೆ. ಅದರಲ್ಲಿ ಬಡವರು ಇದ್ದಾರೆ ಅಂದ್ರೆ ಮತ್ತೆ ಅವರಿಗೆ ಬಿಪಿಎಲ್ ಕಾರ್ಡ್ (BPL Card) ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಈ ಬಗ್ಗೆ ನಿನ್ನೆಯೇ ಸಿಎಂ ಅವರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಪಿಎಲ್, ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ: ಕೆ.ಹೆಚ್.ಮುನಿಯಪ್ಪ
Advertisement
ಯಾವ ಬಡವರಿಗೂ ತೊಂದ್ರೆ ಆಗಲ್ಲ. ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ಕುಮಾರಸ್ವಾಮಿ ರಾಜ್ಯಕ್ಕೆ ಏನು ಮಾಡಿದ್ದಾರೆ ರೀ? ಅವರ ಕೊಡುಗೆ ರಾಜ್ಯಕ್ಕೆ ಏನಿದೆ..? ಗಾಳಿಯಲ್ಲಿ ಗುಂಡು ಹೊಡೆಯೋದೇ ಕೊಡುಗೆನಾ? ನಾವು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದೇವೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಯಾರು ಏನೂ ಗಾಬರಿ ಪಡಬೇಕಾಗಿಲ್ಲ. ಮೋದಿ ಅವರು ಕೊಟ್ಟಿರುವ ಭರವಸೆ ಈಡೇರಿಸುವ ಕೆಲಸ ಮಾಡಲಿ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡಲಿ ರಾಜ್ಯದಲ್ಲಿ ಜಾಗ ಬೇಕಿದ್ರೆ ಹೇಳಲಿ, ನಾನೇ ನಿಂತು ಜಾಗ ಕೊಡಿಸುತ್ತೇನೆ ಉದ್ಯೋಗ ನೀಡಲಿ ಎಂದು ಗುಡುಗಿದರು. ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ-ಐಸಿಯುಗಳತ್ತ ಚಿತ್ತ: ದಿನೇಶ್ ಗುಂಡೂರಾವ್