ಬೆಂಗಳೂರು: ನೆರೆ ಪೀಡಿತ ಪ್ರದೇಶಗಳಿಗೆ (Neighboring Affected Areas) ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಬೇಕು ಹಾಗೂ ಅಗತ್ಯ ನೆರವುಗಳನ್ನು ಒದಗಿಸಿಕೊಡಬೇಕು ಎಂದು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಭಾರೀ ಮಳೆಯಾಗುತ್ತಿದೆ ಮತ್ತು ಪ್ರವಾಹದಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿ ನೀರಿನ ಹೊರಹರಿವು ಹೆಚ್ಚಾದ ಪರಿಣಾಮ ನೆರೆ ಪರಿಸ್ಥಿತಿ ಎದುರಾಗಿದೆ. ನದಿ ಪಾತ್ರದ ಜನ, ಜಾನುವಾರು, ಆಸ್ತಿ, ಬೆಳೆಗಳಿಗೆ ಹಾನಿಗಳ ಬಗ್ಗೆ ವರದಿಯಾಗುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಿರುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ನೆನಪಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಿಬಿಐ ತನಿಖೆ ಮಾಡಿದ್ರೆ ಬಿಎಸ್‌ವೈ ಇದ್ದಾನೋ, ಬಿವೈವಿ ಇದ್ದಾನೋ ಎಂದು ಗೊತ್ತಾಗುತ್ತೆ: ಯತ್ನಾಳ್
ಸಚಿವರು ತಮ್ಮ ಕ್ಷೇತ್ರ ವ್ಯಾಪ್ತಿ ಹಾಗೂ ಇತರೇ ಪ್ರವಾಹಪೀಡಿತ ಪ್ರದೇಶಗಳ ಶಾಸಕರ ಸಂಪರ್ಕದೊಂದಿಗೆ ಭೇಟಿ ಕೊಟ್ಟು, ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಅವರ ನೆರವಿಗೆ ಧಾವಿಸಬೇಕಾಗಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ. ವರುಣನ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ಇದೇ ವೇಳೆ ಉಂಟಾಗಿರುವ ಅವಘಡಗಳಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಜನಪ್ರತಿನಿಧಿಗಳಾದ ನಾವು ಅವರ ಜೊತೆ ನಿಲ್ಲೋಣ ಎಂದು ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿ ಪ್ರವಾಹದಿಂದ ದ್ವೀಪದಂತಾದ ಗ್ರಾಮ – ಮೂವರು ಗರ್ಭಿಣಿಯರ ಸ್ಥಳಾಂತರ