ಬೆಂಗಳೂರು: ನಮ್ಮ ಗುಜರಾತ್ ಶಾಸಕರ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಅತಿಥ್ಯ ನಿಡೋದು ನಮ್ಮ ಕೆಲಸ ನಾವು ಮಾಡ್ತಿದ್ದೇವೆ. ನಾವು ಯಾರನ್ನು ಹಿಡಿದಿಟ್ಟುಕೊಂಡಿಲ್ಲ. ಯಾರು ದಡ್ಡರಲ್ಲ, ಚಿಕ್ಕ ಮಕ್ಕಳಲ್ಲ ಅಂತ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗುಜರಾತ್ ಶಾಸಕರ ರೆಸಾರ್ಟ್ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಐಟಿ ಕ್ಷೇತ್ರ ಇನ್ನಿತರ ಪ್ರವಾಸಿ ಸ್ಥಳ ವೀಕ್ಷಣೆ ಮಾಡಿಸುತ್ತೇವೆ. ಯಾರ ಮೊಬೈಲ್ ಕಿತ್ತುಕೊಂಡಿಲ್ಲ. ಯಾರನ್ನು ಬಂಧಿಸಿಲ್ಲ. ಶಾಸಕರ ಸಭೆಯ ಬಳಿಕ ಅವರೆಲ್ಲ ಮೀಡಿಯ ಮುಂದೆ ಬರಲಿದ್ದಾರೆ. 43 ಶಾಸಕರು ಇಲ್ಲಿ ಇದ್ದಾರೆ. ಮತ್ತಷ್ಟು ಜನ ಬರ್ತಾರೆ. ನಾಲ್ವರು ಐವರು ಯಾರು ತಪ್ಪಿಸಿಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಇದ್ದಾರೆ. ಎಲ್ಲಿಗೆ ಪ್ರವಾಸ ಅನ್ನುವುದನ್ನ ಇನ್ನು ನಿರ್ಧರಿಸಿಲ್ಲ. ದೇವಸ್ಥಾನ, ಟೂರಿಸಂ ಸ್ಥಳಗಳಿಗೆ ಕಳಿಸುತ್ತೇವೆ ಅಂತ ಹೇಳಿದರು.
Advertisement
ಕುದುರೆ ವ್ಯಾಪಾರ ಭಯದಲ್ಲಿ ರೆಸಾರ್ಟ್ ರಾಜಕೀಯ ಮಾಡ್ತಿದ್ದೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಾದ್ಯಂತ ಕುದುರೆ ವ್ಯಾಪಾರ ನಡೆಯುತ್ತಿದೆ. ಅಧಿಕಾರ ಬಳಸಿಕೊಂಡು ಕುದುರೆ ವ್ಯಾಪಾರ ಮಾಡ್ತಿದ್ದಾರೆ. ಇದನ್ನ ತಪ್ಪಿಸಲು ಎಲ್ಲರು ಬಂದಿದ್ದಾರೆ. ಬಿಜೆಪಿ ಐದು ವರ್ಷ ಇದ್ದಾಗ ಏನ್ ಮಾಡಿತ್ತು? ಯಾರನ್ನ ಎಲ್ಲಿಗೆ ಕರೆದುಕೊಂಡು ಹೋಗಿದ್ರು? ರೆಸಾರ್ಟ್ ರಾಜಕೀಯ ಮಾಡಿದ್ರು. ಅದನ್ನೆ ಈಗ ನಾವು ಮಾಡುತ್ತಿದ್ದೇವೆ ಅಂತ ಅವರು ಹೇಳಿದ್ರು.
Advertisement
ಅಹಮದ್ ಪಟೇಲ್ ಸೋಲು ಗ್ಯಾರಂಟಿ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅವರು ಭವಿಷ್ಯ ಹೇಳೋರು ಹೇಳಲಿ. ಮುಂದೆ ಏನಾಗುತ್ತೆ ನೋಡೊಣ ಅಂತಾ ತಿಳಿಸಿದ್ರು.
Advertisement
ಈಗಲ್ ಟನ್ ರೆಸಾರ್ಟ್ ನಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದು, ಬೆಳಗ್ಗೆ ಲಘು ಉಪಹಾರ ಸೇವಿಸಿದ್ದಾರೆ. ಗಾಲ್ಫ್ ಆಡಲು ಬಾರದೇ ಇದ್ದರೂ ಗಾಲ್ಫ್ ಆಡಿ ಎಂಜಾಯ್ ಮಾಡಿದ್ದಾರೆ. ಗುಜರಾತ್ ಶಾಸಕರ ಸಂಪೂರ್ಣ ಉಸ್ತುವಾರಿಯನ್ನು ಇಂಧನ ಸಿಚಿವ ಡಿಕೆ ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಶಾಸಕರ ಉಪಚಾರಕ್ಕೆ ರೆಸಾರ್ಟ್‍ನಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ಠಿಕಾಣಿ ಹೂಡಿದ್ದಾರೆ. ಈಗಲ್‍ಟನ್ ರೆಸಾರ್ಟ್‍ಗೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
Advertisement
ಗುಜರಾತ್‍ನಲ್ಲಿ ನೆರೆ ಆಗಿ ಸಂಕಷ್ಟದಲ್ಲಿದ್ದಾಗ ಜನಪ್ರತಿನಿಧಿಗಳು ಇಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಜನರು ಈಗ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ.