ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಪ್ರತಿಕ್ರಿಯಿಸಿದ್ದು, ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಆಗಲ್ಲ ಎಂದು ಹೇಳಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನನಗೆ, ಸುರೇಶ್‌ಗೆ ನೋಟಿಸ್ ಕೊಡ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಮ್ಮನ್ನು ಅವರು ಕರೆಯಬಾರದಿತ್ತು. ನಾವೆಲ್ಲ ವಿವರವಾಗಿ ಇಡಿಗೆ ಕೊಟ್ಟಿದ್ದು, ಇಡಿಯವರು ಚಾರ್ಜ್‍ಶೀಟ್‍ನಲ್ಲಿ ನಮ್ಮ ಹೆಸರೇನು ಸೇರಿಸಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ದರು. ಈಗ ಈ ಹಂತದಲ್ಲಿ ಕರೆದಿರುವುದು ನನಗೆ ಗೊತ್ತಿಲ್ಲ. ಆದರೆ ನಾನು ಹೋಗ್ತಿನಿ ಎಂದಿದ್ದಾರೆ.
ನೋಟಿಸ್ ಪೂರ್ತಿ ಓದಿದ್ದೇನೆ. ನಮ್ಮ ಲಾಯರ್‌ಗಳ ಹತ್ತಿರ ಮಾತನಾಡಿ ಅದಕ್ಕೆ ಏನು ಉತ್ತರ ಕೊಡಬೇಕು ಕೊಡ್ತಿನಿ. ನೋಟಿಸ್ ಕೊಡುವಂತಹದ್ದು ಏನಿತ್ತು? ನಮ್ಮ ಪಾರ್ಟಿಗೆ ದುಡ್ಡು ಕೊಡದೆ ಇನ್ಯಾರಿಗೆ ಕೊಡೋಣ ಎಂದಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಬುಡಕ್ಕೆ ಬಂತು ನ್ಯಾಷನಲ್ ಹೆರಾಲ್ಡ್ ಕೇಸ್
ಕಾರ್ಟಿಯರ್ ವಾಚ್ ವಿಚಾರವಾಗಿ, ಯಾರು ಶರ್ಟ್ ಹಾಕ್ತಾರೆ, ಯಾರು ವಾಚ್ ಹಾಕ್ತಾರೆ, ಯಾರು ಕನ್ನಡಕ ಹಾಕ್ತಾರೆ ಇವೆಲ್ಲ ನಾನು ಯಾರನ್ನು ಪ್ರಶ್ನೆ ಮಾಡಲ್ಲ. ಇವೆಲ್ಲ ಅವರ ವೈಯಕ್ತಿಕವಾದಂತಹ ವಿಚಾರಗಳು, ಅವರ ಆಸೆಗಳು. ಕೆಲವರು ಒಂದು ಸಾವಿರ ಶೂ ಹಾಕ್ತಾರೆ, ಕೆಲವರು ಹತ್ತು ಸಾವಿರ ಶೂ ಹಾಕ್ತಾರೆ. ಕೆಲವರು ಒಂದು ಲಕ್ಷದ ಶೂ ಹಾಕ್ತಾರೆ. ನಾನು ಒಂದು ಸಾವಿರದ ವಾಚು ಕಟ್ತಿನಿ, ಹತ್ತು ಲಕ್ಷದ ವಾಚು ಕಟ್ತಿನಿ ಅದು ನನಗೆ ಬಿಟ್ಟಿಂತಹದ್ದು. ಅದು ನನ್ನ ಆಸ್ತಿ, ಸಂಪಾದನೆ, ನನ್ನ ಕಷ್ಟ, ನನ್ನ ಶ್ರಮ.
ಪಾಪಾ ವಿರೋಧ ಪಾರ್ಟಿಯವರು ಗೊತ್ತಿಲ್ಲದೆ ಮಾತಾಡಿದ್ದಾರೆ. ಬೇರೆಯವರಾಗಿದ್ರೆ ಮಾತನಾಡಲು ಹೋಗುತ್ತಿರಲಿಲ್ಲ. ನನ್ನ ವ್ಯವಹಾರ ನನಗೆ ಗೊತ್ತಿದೆ. ನನ್ನ ವ್ಯವಹಾರ ಏನು, ಬದುಕು ಏನು ಬಿಜೆಪಿಯ 90% ಜನರಿಗೆ ಗೊತ್ತಿದೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದ್ವೇಷ ಭಾಷಣ ವಿಧೇಯಕ ಸೇರಿ 8 ಮಸೂದೆಗಳಿಗೆ ಸಚಿವ ಸಂಪುಟ ಅನುಮೋದನೆ

